

ಹುಬ್ಬಳ್ಳಿ: ಕೇಂದ್ರ ಬಿಜೆಪಿ ಸರ್ಕಾರದ ಸೇಡಿನ ರಾಜಕಾರಣದ ವಿರುದ್ಧ ಧಾರವಾಡ ಗ್ರಾಮೀಣ ಹಾಗೂ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಕಿಮ್್ಸ ಮುಂಭಾಗ ಗೇಟ್ ಬಳಿಯ ಮಹಾತ್ಮಗಾಂಧಿ ಪುತ್ಥಳಿ ಬಳಿ ಬುಧವಾರ ಮೌನ ಪ್ರತಿಭಟನೆ ನಡೆಯಿತು.
ಮಹಾಂತ್ಮಗಾಂಧಿ ಜನಿಸಿದ ದೇಶದಲ್ಲಿ ಹಿಟ್ಲರ್ ಸಂಸ್ಕೃತಿ ನಡೆಯುವುದಿಲ್ಲ. ರಾಹುಲ್ ಗಾಂಧಿ ಅವರ ಸತ್ಯ ನಡಿಗೆಯಲ್ಲಿ ನಮ್ಮ ಹೆಜ್ಜೆ, ಕುತಂತ್ರದಿಂದ ಸತ್ಯವನ್ನು ಮುಚ್ಚಿಡಲಾಗದು ಇತ್ಯಾದಿ ಶೀರ್ಷಿಕೆಗಳುಳ್ಳ ಭಿತ್ತಿಪತ್ರಗಳನ್ನು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರದರ್ಶಿಸಿದರು. ನಂತರ ಮಹಾತ್ಮಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ಪ್ರಮುಖರಾದ ಸತೀಶ ಮೆಹರವಾಡೆ, ಎಫ್.ಎಚ್. ಜಕ್ಕಪ್ಪನವರ, ಶರಣಪ್ಪ ಕೊಟಗಿ, ಬಂಗಾರೇಶ ಹಿರೇಮಠ, ವಸಂತ ಲದ್ವಾ, ಸದಾನಂದ ಡಂಗನವರ, ನವೀದ್ ಮುಲ್ಲಾ, ಶಾರುಖ್ ಮುಲ್ಲಾ ಇತರರು ಇದ್ದರು.