ಮಂಡ್ಯ ಕಾಂಗ್ರೆಸ್‌ನಲ್ಲಿ ಕರಗದ ಅತೃಪ್ತಿ: ಅಸಮಾಧಾನಕ್ಕೆ ಸಾಕ್ಷಿಯಾದ ಸಿದ್ದಾರೂಢ ಗೈರು

Congress Bandya)
Published on

ಮಂಡ್ಯ: ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದರೂ ಮಂಡ್ಯ ಕ್ಷೇತ್ರದ ಕಾಂಗ್ರೆಸ್‌ನ ಅತೃಪ್ತಿ ಕರಗಿಲ್ಲ ಎನ್ನುವುದು ಮತ್ತೆ ಸಾಬೀತಾಗುತ್ತಿದೆ. ಅಭ್ಯರ್ಥಿ ರವಿಕುಮಾರ್ ಗಣಿಗ ಅವರು ತಾಲೂಕಿನ ಬಸರಾಳು ಗ್ರಾಮದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಆದರೆ ಅದೇ ಭಾಗದ ಕಾಂಗ್ರೆಸ್ ಮುಖಂಡ ಸಿದ್ದಾರೂಢ ಸತೀಶ್‌ಗೌಡ ಗೈರಾಗಿದ್ದು ಚರ್ಚೆಗೆ ಕಾರಣವಾಗಿದೆ.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ವಿಚಾರದಿಂದ ಪ್ರಾರಂಭವಾದ ಅತೃಪ್ತಿ ಒಂದಲ್ಲ ಒಂದು ರೀತಿ ಹೊರಗೆ ಬರುತ್ತಲೇ ಇದೆ. ಇದೀಗ ಮುಂದುವರೆದ ಭಾಗವಾಗಿ ಬಿ ಾರ್ಮ್ ಆಕಾಂಕ್ಷಿತರೂ ಆಗಿದ್ದ ಸಿದ್ದಾರೂಢ ತಮ್ಮ ಭಾಗದಲ್ಲಿ ನಡೆದ ರೋಡ್ ಶೋನಲ್ಲಿ ಭಾಗವಹಿಸಲಿಲ್ಲ. ಇದಕ್ಕೆ ಕಾರಣವೆನ್ನೆಂಬುದರ ಬಗ್ಗೆಯೂ ಸ್ಪಷ್ಟತೆ ಸಿಕ್ಕಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯಮಟ್ಟದ ನಾಯಕರು ಆಗಮಿಸಿದಾಗ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮುಖಂಡರು ಮತಯಾಚನೆ ವೇಳೆ ಗೈರಾಗುತ್ತಿರುವುದು ಬಂಡಾಯ ಶಮನವಾಗದಿರುವುದಕ್ಕೆ ಸಾಕ್ಷಿಯಾಗುತ್ತಿದೆ.

ಇನ್ನು ರವಿಕುಮಾರ್ ಕೆರಗೋಡು ಹೋಬಳಿ 24 ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಸಿ ಸಂಜೆಗೆ ಬಸರಾಳು ಗ್ರಾಮಕ್ಕೆ ಆಗಮಿಸಿದಾಗ ಅದ್ಧೂರಿ ಸ್ವಾಗತ ನೀಡಲಾಯಿತು. ನಿರೀಕ್ಷೆಗೂ ಮೀರಿದ ಜನರು ಸೇರಿದ್ದರು. ಬೃಹತ್ ಹೂವಿನ ಹಾರ ಹಾಕಲಾಯಿತು. ಈ ವೇಳೆ ಮಾತನಾಡಿದ ಅವರು, ಕಳೆದ 15 ವರ್ಷ ನಿಮ್ಮ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ನಿಮ್ಮ ಕಷ್ಟ ಸುಖ ದುಃಖ ದುಮ್ಮಾನಗಳಲ್ಲಿ ಭಾಗಿಯಾಗಿದ್ದೇನೆ ಎಂದರು.

ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಪ್ಪ, ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯ್, ನಾಗೇಶ್, ಬಿ.ಟಿ.ಶಂಕರ್, ಜಿ.ಸಿ.ಆನಂದ್, ಅಪ್ಪಾಜಿಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net