ರೈತರ ಮರ್ಯಾದೆ ಕಳಿಬೇಡಿ: ಕಾಂಗ್ರೆಸ್ ವಿರುದ್ದ ರೈತ ಸಂಘ ಟೀಕೆ

19_09_Mdy_09(Raytha Sanga)
Published on

ಮಂಡ್ಯ: ನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಭೆಯಲ್ಲಿ ನಾಯಕರು ಹಸಿರು ಟವೆಲ್ ಹಾಕಿಕೊಂಡಿರುವ ಬಗ್ಗೆ ರಾಜ್ಯ ರೈತ ಸಂಘ ಕಿಡಿಕಾರಿದೆ. ಭಾರತ್ ಜೋಡೋ ಅಂಗವಾಗಿ ಸೆ.17ರಂದು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಕೆಲ ನಾಯಕರು ಹಸಿರು ಟವೆಲ್ ಹಾಕಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಖಾತೆಯಿಂದ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಟೀಕಿಸಿದ್ದು, ‘ನಿಮ್ಮ ಪಕ್ಷದ ಟವೆಲ್ ಅಂತಾ ಇದೆ. ಅದನ್ನು ಹಾಕಿಕೊಳ್ಳಿ. ರೈತ ಸಂಘದ ಹಸಿರು ಟವೆಲ್ ಹಾಕಿಕೊಂಡು ರೈತರ ಮರ್ಯಾದೆ ಕಳಿಬೇಡಿ ಎಂದಿದ್ದಾರೆ. ಇದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ಯಾಗ್ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net