ವಡ್ಡರ್ಸೆ ಗ್ರಾಪಂ ಎದುರು ಕಾಂಗ್ರೆಸ್ ಪ್ರತಿಭಟನೆ

vaddarse
ಬಿಜೆಪಿಯ ಸುಳ್ಳು ಆರೋಪಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
Published on

ಕೋಟ: ಕೋಟ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ವಡ್ಡರ್ಸೆ ಗ್ರಾ.ಪಂ ಎದುರು ಬಿಜೆಪಿಯ ಸುಳ್ಳು ಆರೋಪಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.

ರಾಜ್ಯ ಕಾಂಗ್ರೆಸ್ ನಾಯಕ ಅಮೃತ್ ಶೆಣೈ ವಾತನಾಡಿ, ರಾಜ್ಯ ಸರ್ಕಾರದ ಜನಪರ ಯೋಜನೆಗಳು ಹಾಗೂ ಬಿಜೆಪಿಗರ ಸುಳ್ಳು ಆರೋಪಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿದರು.

ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುವಾರ್ ಶೆಟ್ಟಿ ವಡ್ಡರ್ಸೆ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ.ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಚಂದ್ರ ಶೆಟ್ಟಿ ಯಾಳಕ್ಲು, ಗ್ರಾಪಂ ಸದಸ್ಯ ಚಂದ್ರಶೇಖರ್ ಶೆಟ್ಟಿ ಅಚ್ಲಾಡಿ, ಜಯಲಕ್ಷ್ಮೀ ಆಚಾರ್, ಪ್ರಮುಖರಾದ ಸುರೇಶ್ ಶೆಟ್ಟಿ, ಸುನೀಲ್ ಶೆಟ್ಟಿ, ಗೋಪಾಲ ಕಾಂಚನ್, ರಾಜೇಂದ್ರ ಶೆಟ್ಟಿ, ಬಾಬು ಪೂಜಾರಿ, ದಿನೇಶ್ ಬಂಗೇರ, ಶ್ಯಾಮರಾಜ್ ಶೆಟ್ಟಿ, ಶೇಖರ್ ಶೆಟ್ಟಿ, ಸುರೇಂದ್ರ ಶೆಟ್ಟಿ ಹಾಗೂ ಯುವ ಕಾಂಗ್ರೆಸ್‌ನ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಪ್ರದೀಪ್ ಕೊತ್ತಾಡಿ, ಶಶಿ ಉಪ್ಲಾಡಿ, ರಾು, ಮಹಾಬಲ ಕಾವಾಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net