

ಅರಸೀಕೆರೆ ಗ್ರಾಮಾಂತರ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶನಿವಾರ ಬಾಣಾವರ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ-206ರಲ್ಲಿ ಪ್ರತಿಭಟನೆ ಮಾಡಿದರು.
ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಬೇಕು ಎನ್ನುವ ಸಲುವಾಗಿ ಅವರ ವಿರುದ್ಧ ಪಿತೂರಿ ಮಾಡಲಾಗುತ್ತಿದೆ. ಇದು ಸಮಂಜಸವಲ್ಲ. ಪರಿಪೂರ್ಣವಾಗಿ ಶೋಧಿಸಿ ನಂತರ ರಾಜಪಾಲರು ಅನುಮತಿ ನೀಡಬೇಕಾಗಿತ್ತು ಎಂದು ಕಿಡಿಕಾರಿದರು.
ಮುಖಂಡರಾದ ಎಂ.ಜಯಣ್ಣ. ಬಿ.ಆರ್.ಲಕ್ಷ್ಮೀಶ್, ಡಿ.ಆರ್.ರಾಜು, ಭಾಗ್ಯಮ್ಮ, ಬಿ.ಆರ್.ಶ್ರೀಧರ್, ಬಿ.ರವಿಶಂಕರ್, ಸೈಯದ್ ಆಸಿಫ್, ಇಮ್ರಾನ್, ಆರಿಫ್ ಜಾನ್, ಕೋಳಿ ಪ್ರಕಾಶ್, ಮಂಜಣ್ಣ, ದಾದಾಪೀರ್, ಆದಿಲ್, ಮನ್ಸೂರ್, ಸೋಮಣ್ಣ, ಆರಿಫ್, ಮಹೇಶ್, ಅರಕೆರೆ ಪ್ರವೀಣ್, ಬಿ.ಜೆ.ಭಾಸ್ಕರ್ ಇತರರು ಇದ್ದರು.