

ಧಾರವಾಡ: ಧ್ವಜ ಹಾರಿಸುವ ಹೇಳಿಕೆ ಖಂಡಿಸಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿ- ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ರಾಣಿ ಚನ್ನಮ್ಮ ಬ್ಲಾಕ್ ಕಾಂಗ್ರೆಸ್ ಹಾಗೂ ಧಾರವಾಡ ಗ್ರಾಮೀಣ ಮತ್ತು ನಗರ ಬ್ಲಾಕ್ ಸಮಿತಿಯಿಂದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ನಾಗರಾಜ ಗೌರಿ ಮಾತನಾಡಿ, ಸಚಿವ ಈಶ್ವರಪ್ಪ ದೇಶದ್ರೋಹಿ ಹೇಳಿಕೆ ನೀಡಿದ್ದಾರೆ. ತ್ರಿವರ್ಣ ಧ್ವಜವು ಭಾರತದ ಅಖಂಡತೆ, ಸಾರ್ವಭೌಮತೆ, ಅಖಂಡತೆಯ ಸಂಕೇತವಾಗಿದೆ. ಈ ಬಗ್ಗೆ ಕ್ಷುಲ್ಲಕ ಹೇಳಿಕೆ ನೀಡಿರುವ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟು, ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದರು. ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಲಾಯಿತು.
ಮುಖಂಡರಾದ ದೀಪಕ ಚಿಂಚೋರೆ, ಸತೀಶ ತುರಮರಿ, ಬಸವರಾಜ ಕಿತ್ತೂರ, ದೀಪಾ ಗೌರಿ, ಆನಂದ ಸಿಂಗನಾಥ, ಗಣೇಶ ಮುಧೋಳ, ಮಯೂರ ಮೋರೆ, ಬಸವರಾಜ ಜಾಧವ, ಮಂಜುನಾಥ ಭೋವಿ, ಮಹೇಶ ಹುಲ್ಲಣ್ಣವರ, ವಸಂತ ಅರ್ಕಾಚಾರಿ, ಅನೀಶ ಚಿಂಚೋರೆ, ಆನಂದ ಮುಶಣ್ಣವರ, ಶಿವು ಚನ್ನಗೌಡರ, ಗಜಾನನ ಇರಕಲ್ಲ, ನಾಗರಾಜ ಇಸರಣ್ಣವರ, ಅಜಗರ ಮುಲ್ಲಾ, ರೋಹಿತ ಕಲಾಲ, ಮುತ್ತು ಕೋಟೂರ, ಇತರರಿದ್ದರು.
ಜಿಲ್ಲಾ ಕಾಂಗ್ರೆಸ್ ಸಮಿತಿ: ಸಚಿವ ಈಶ್ವರಪ್ಪ ಹೇಳಿಕೆ ಖಂಡಿಸಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಅಧ್ಯಕ್ಷ ಅಲ್ತಾಫ್ ಹಳ್ಳೂರ, ಪ್ರಕಾಶ ಹಳಿಯಾಳ, ಆನಂದ ಜಾಧವ, ಎಚ್.ಎಂ. ರಾಜು, ಶೋಯೆಬ್ ಜಮಾದಾರ, ನಾಗರಾಜ ಗುರಿಕಾರ, ಜೇಮ್್ಸ ಯಾಮಾ, ಫ್ರಾನ್ಸಿಸ್ ಸಕ್ರಿ, ಆನಂದ ಸಿಂಗನಾಥ, ಇತರರು ಪಾಲ್ಗೊಂಡಿದ್ದರು.