ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಖಂಡನೀಯ

udp-16-congress
Published on

ಉಡುಪಿ: ಜವಹರ್​ ಲಾಲ್​ ನೆಹರೂ ಅವರು ಸ್ವಾತಂತ್ರ$್ಯ ಸಂಗ್ರಾಮ ಕಾಲದಲ್ಲಿ ಜನರಿಗೆ ಸತ್ಯ ಸಂಗತಿ ತಿಳಿಸಲು ತನ್ನ ಸಂಪತ್ತು ಅಡಮಾನವಿಟ್ಟು ನ್ಯಾಶನಲ್​ ಹೆರಾಲ್ಡ್​ ಪತ್ರಿಕೆ ಪ್ರಾರಂಭಿಸಿದ್ದರು. ಕೇಂದ್ರ ಸರ್ಕಾರ ಗಾಂಧಿ ಕುಟುಂಬದ ವಿರುದ್ಧ ಕ್ಷುಲ್ಲಕ ಆರೋಪಗಳನ್ನು ಹೊರಿಸಿ ಜೈಲಿಗೆ ಕಳುಹಿಸುವ ಹುನ್ನಾರ ನಡೆಸುತ್ತಿದೆ. ಸರ್ಕಾರದ ಸರ್ವಾಧಿಕಾರಿ ಧೋರಣೆ ಖಂಡನೀಯ ಎಂದು ವಿಧಾನ ಪರಿಷತ್​ ಸದಸ್ಯ ಹಾಗೂ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಮಂಜುನಾಥ್​ ಭಂಡಾರಿ ಆಕ್ರೋಶವ್ಯಕ್ತಪಡಿಸಿದರು.

ಆದಿಉಡುಪಿಯಲ್ಲಿರುವ ಆದಾಯ ತೆರಿಗೆ ಕಚೇರಿಯ ಮುಂಭಾಗದಲ್ಲಿ ವಿರೋಧ ಪಕ್ಷದ ನಾಯಕರ ಧ್ವನಿಯನ್ನು ದಮನಗೊಳಿಸುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್​ ಸಮಿತಿಯ ನೇತೃತ್ವದಲ್ಲಿ ನಡೆದ ಬೃಹತ್​ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಇಡಿ, ಸಿಬಿಐ ಮೊದಲಾದ ಕೇಂದ್ರೀಯ ಸಂಸ್ಥೆಗಳ ಮೂಲಕ ವಿರೋಧಪಕ್ಷದ ನಾಯಕರ ಕೈ ಕಟ್ಟಿಹಾಕುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್​ ನಾಯಕ ಅಶೋಕ್​ ಚೌಹಾಣ್​, ಮಾಜಿ ಕೇಂದ್ರ ಸಚಿವ ಪ್ರುಲ್​ ಪಟೇಲ್​ ವಿರುದ್ಧ ಇಡಿ ಕೇಸು ದಾಖಲಿಸಿದ್ದರೂ ಅವರು ಬಿಜೆಪಿ ಸೇರಿದ ಬಳಿಕ ವಿಚಾರಣೆ ಸ್ಥಗಿತಗೊಳಿಸಿದೆ. ಪಕ್ಷದ ಕಠಿಣ ಸನ್ನಿವೇಶದಲ್ಲಿ ಕಾರ್ಯಕರ್ತರು ಒಟ್ಟಾಗಿ ಹೋರಾಟ ನಡೆಸಬೇಕು ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು, ಕೆ.ಪಿ.ಸಿ.ಸಿ ಉಪಾಧ್ಯಕ್ಷರಾದ ಎಂ.ಏ.ಗಫೂರ್​, ಉಡುಪಿ ಜಿಲ್ಲಾ ಕಾಂಗ್ರೆಸ್​ ಸಮಿತಿಯ ಕಾರ್ಯಾಧ್ಯಕ್ಷ ಕಿಶನ್​ ಹೆಗ್ಡೆ ಕೊಳ್ಕೆಬೈಲು, ನಾಯಕರಾದ ದಿನೇಶ್​ ಹೆಗ್ಡೆ ಮೊಳಹಳ್ಳಿ, ಪ್ರಸಾದ್​ ರಾಜ್​ ಕಾಂಚನ್​, ಬ್ಲಾಕ್​ ಕಾಂಗ್ರೆಸ್​ ಸಮಿತಿ ಅಧ್ಯಕ್ಷರಾದ ರಮೇಶ್​ ಕಾಂಚನ್​, ಶುಭದ್​ ರಾವ್​, ಗೋಪಿನಾಥ್​ ಭಟ್​, ಅರವಿಂದ್​ ಪೂಜಾರಿ, ಪ್ರದಿಪ್​ ಶೆಟ್ಟಿ, ನವೀನ್​ ಚಂದ್ರ ಸುವರ್ಣ, ರಾಘವೇಂದ್ರ ಶೆಟ್ಟಿ, ಹರಿಪ್ರಸಾದ್​ ಶೆಟ್ಟಿ, ಪಕ್ಷದ ನಾಯಕರಾದ ರಾಜು ಪೂಜಾರಿ, ಮುರಳಿ ಶೆಟ್ಟಿ, ದಿನೇಶ್​ ಪುತ್ರನ್​, ಹರೀಶ್​ ಕಿಣಿ, ಭುಜಂಗ ಶೆಟ್ಟಿ, ಕೀರ್ತಿ ಶೆಟ್ಟಿ, ಅಮೃತ್​ ಶೆಣೈ, ಫಾದರ್​ ವಿಲಿಯಮ್​ ಮಾರ್ಟಿಸ್​, ಸದಾಶಿವ ಕಟ್ಟೆಗುಡ್ಡೆ, ಮಹಾಬಲ ಕುಂದರ್​, ಕೃಷ್ಣ ಶೆಟ್ಟಿ ಬಜಗೋಳಿ, ವಿಶ್ವಾಸ್​ ಅಮೀನ್​, ಡಾ. ಸುನಿತಾ ಶೆಟ್ಟಿ, ಜ್ಯೋತಿ ಹೆಬ್ಬಾರ್​, ಮೀನಾಕ್ಷಿ ಮಾಧವ ಬನ್ನಂಜೆ, ರೋಶ್ನಿ ಒಲಿವರ್​, ಸತೀಶ್​ ಕೊಡವೂರು, ಸಂಧ್ಯಾ ತಿಲಕ್​ರಾಜ್​ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net