ಬೆಲೆ ಏರಿಕೆಗೆ ಕೈ ಕಾರ್ಯಕರ್ತರ ಆಕ್ರೋಶ

4MDG2 PRATIBHATANE
ಮುಂಡರಗಿ ಪಟ್ಟಣದ ಕೊಪ್ಪಳ ಸರ್ಕಲ್​ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ರಾಮಕೃಷ್ಣ ದೊಡ್ಡಮನಿ, ಡಿ.ಡಿ. ಮೋರನಾಳ, ಜ್ಯೋತಿ ಕುರಿಯವರ, ಇತರರಿದ್ದರು.
Published on

ಮುಂಡರಗಿ: ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಕೊಪ್ಪಳ ಸರ್ಕಲ್​ನಲ್ಲಿ ಶನಿವಾರ ಹೆದ್ದಾರಿಯಲ್ಲಿ ಕಟ್ಟಿಗೆ ಒಲೆ ಹಚ್ಚಿ ಚಹಾ ತಯಾರಿಸುವ ಮೂಲಕ ಪ್ರತಿಭಟನೆ ನಡೆಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ಮಾತನಾಡಿ, ದರ ಏರಿಕೆಯಿಂದಾಗಿ ಬಡವರ ಬದುಕು ಕಷ್ಟಕರವಾಗಿದೆ. ಜನಸಾಮಾನ್ಯರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಹಾಗೂ ಅವುಗಳನ್ನು ನಿವಾರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.

ಎಪಿಎಂಸಿ ಮಾಜಿ ಸದಸ್ಯ ಕೊಟ್ರೇಶ ಅಂಗಡಿ, ತಾಲೂಕು ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಜ್ಯೋತಿ ಕುರಿಯವರ, ಭುವನೇಶ್ವರಿ ಕಲ್ಲಕುಟಗರ, ರಾಮಚಂದ್ರ ಕಲಾಲ, ಭರತ್ ನಾಯಕ, ರಾಘವೇಂದ್ರ ನರೇಗಲ್ಲ ಮಾತನಾಡಿದರು. ಡಿ.ಎಂ. ಕಾತರಕಿ, ಯಲ್ಲಪ್ಪ ಹೊಂಬಳಗಟ್ಟಿ, ರುದ್ರಗೌಡ ಪಾಟೀಲ, ಲಕ್ಷ್ಮೀದೇವಿ ಮಾಗಡಿ, ಪಾರ್ವತಿ ಕುಬಸದ, ದಾನೇಶ್ವರಿ ಭಜಂತ್ರಿ, ಪ್ರತಿಭಾ ಹೊಸಮನಿ, ರಾಜು ದಾವಣಗೆರೆ, ಡಾ. ಐ.ಎಸ್. ಸರ್ವೆ, ಧೃವಕುಮಾರ ಹೊಸಮನಿ, ಮುದುಕಪ್ಪ ಕುಂಬಾರ, ಶೇಖರ ಜುಟ್ಲಣ್ಣವರ, ನಾಗರಾಜ ಹೊಂಬಳಗಟ್ಟಿ, ಬಸವರಾಜ ಬಿಸನಳ್ಳಿ, ಎಂ.ಯು. ಮಕಾಂದಾರ, ರಾಘು ಕುರಿಯವರ, ಯಲ್ಲಪ್ಪ ಹೂಲಗೇರಿ, ಆನಂದ ಪಾಟೀಲ, ವೀರೇಶ ಹಡಗಲಿ, ಇಸ್ಮಾಯಿಲ್ ನಮಾಜಿ, ವಿನೋದ ವಡ್ಡರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net