ಸಿ.ಟಿ. ರವಿ ಹೇಳಿಕೆ ಖಂಡಿಸಿ ಪ್ರತಿಭಟನೆ

Published on
ಗದಗ: ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ನಗರದ ಮಹಾತ್ಮಾ ಗಾಂಽ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ, ಬಿಜೆಪಿ ಯಾವತ್ತಿಗೂ ಸಂವಿಧಾನ ವಿರೋಽ ಪಕ್ಷ. ಆ ಪಕ್ಷದ ಪ್ರತಿನಿಽಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂವಿಧಾನ ಶಿಲ್ಪಿಯನ್ನು ಅವಮಾನಿಸಿದ್ದಾರೆ. ದೇಶಕ್ಕೆ ಪವಿತ್ರವಾದ ಸಂವಿಧಾನ ಕೊಟ್ಟ ಅಂಬೇಡ್ಕರ್ ಹೆಸರನ್ನು ಜಪ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಕಾಂಗ್ರೆಸ್ ಅಂಬೇಡ್ಕರ್ ಹೆಸರನ್ನು ನಿರಂತರವಾಗಿ ಜಪಿಸಲಿದೆ. ಆದರೆ ಜನ ಎಚ್ಚೆತ್ತುಕೊಳ್ಳಬೇಕು. ಇಂಥ ಸಂವಿಧಾನ ವಿರೋಽ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.
ಬುದ್ಧ, ಬಸವಣ್ಣ ಸಾರಿದ ಸಮಾನತೆಯ ಸಂದೇಶವನ್ನೆ ಅಂಬೇಡ್ಕರ್ ಪ್ರತಿಪಾದಿಸಿದ್ದಾರೆ. ಸಂವಿಧಾನದಲ್ಲಿ ಅದನ್ನೆ ಉಲ್ಲೇಖಿಸಿದ್ದಾರೆ. ಆದರೆ ಬಿಜೆಪಿ ನಾಯಕರಿಗೆ ಸಮಾನತೆ ಬೇಕಾಗಿಲ್ಲ. ದೇಶದ ಜನ ಶಾಂತಿ- ಸೌಹಾರ್ದಯುತವಾಗಿ ಬದುಕುವುದು ಬೇಕಾಗಿಲ್ಲ. ಇಂಥ ಸಂವಿಧಾನ ವಿರೋಽ ಮನಸ್ಥಿತಿಯನ್ನು ಹೊಂದಿರುವ ಅಮಿತ್ ಶಾ ಅವರನ್ನು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಇನ್ನು ರಾಜ್ಯದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಸಚಿವೆ ಲಕ್ಷಿ÷್ಮÃ ಹೆಬ್ಬಾಳಕರ್ ವಿರುದ್ಧ ಮಾತನಾಡಿದ ಭಾಷೆ, ಬಳಸಿದ ಶಬ್ಧಗಳು ರಾಜಕಾರಣಿಗಳು ತಲೆ ತಗ್ಗಿಸುವಂತಾಗಿದೆ. ಸಿ.ಟಿ. ರವಿ ಹೇಳಿಕೆ ಭವಿಷ್ಯದ ರಾಜಕಾರಣಿಗಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಕೂಡಲೇ ಸಿ.ಟಿ. ರವಿ ಅವರ ಪರಿಷತ್ ಸದಸ್ಯತ್ವನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಬಿ. ಅಸೂಟಿ, ಮಿಥುನ್ ಪಾಟೀಲ, ಅಶೋಕ ಮಂದಾಲಿ, ಟಿ. ಈಶ್ವರ, ಸುಜಾತಾ ದೊಡ್ಡಮನಿ, ವಿ.ಬಿ. ಸೋಮನಕಟ್ಟಿಮಠ, ಉಮರ -Áರೂಕ್ ಹುಬ್ಬಳ್ಳಿ ಇತರರು ಉಪಸ್ಥಿತರಿದ್ದರು.
ಕೋಟ್
ಬಿಜೆಪಿ ನಾಯಕರು ಗದಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಘೇರಾವ್ ಹಾಕಲು ಯತ್ನಿಸುತ್ತಿದ್ದಾರೆ. ಯಾವ ಕಾರಣಕ್ಕೆ ಘೇರಾವ್ ಹಾಕುತ್ತಿದ್ದಾರೆ. ಸಿ.ಟಿ. ರವಿ ಮತ್ತು ಅಮಿತ್ ಶಾ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡು ಬಂದಿದ್ದಾರೆ, ಕಾಂಗ್ರೆಸ್ ಇರುವ ವರೆಗೂ ಸಂವಿಧಾನಕ್ಕೆ ಅಪಚಾರ ಆಗುವ ಕೆಲಸಕ್ಕೆ ಅವಕಾಶ ನೀಡುವುದಿಲ್ಲ.
- ಜಿ.ಎಸ್. ಪಾಟೀಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net