ಹುಬ್ಬಳ್ಳಿ: ಕೇಂದ್ರದ ಬಿಜೆಪಿ ಹಾಗೂ ಭಾರತದ ಚುನಾವಣಾ ಆಯೋಗದ ಓಟ್ ಕಳ್ಳತನ ನೀತಿ ವಿರೋಧಿಸಿ "ಓಟ್ ಚೋರ್ ಗದ್ದಿ ಛೋಡ್' ಘೋಷ ವಾಕ್ಯದಡಿ ಸೆ. 28ರಂದು ಸಂಜೆ 7ಕ್ಕೆ ಪಂಜಿನ ಪ್ರತಿಭಟನಾ ಮೆರವಣಿಗೆಯನ್ನು ಇಲ್ಲಿಯ ಪೂರ್ವ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ವತಿಯಿಂದ ಆಯೋಜಿಸಲಾಗಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಶಾಲ ಅಬ್ಬಯ್ಯ ನೇತೃತ್ವದಲ್ಲಿ ಏರ್ಪಡಿಸಿರುವ ಪ್ರತಿಭಟನೆ ಮೆರವಣಿಗೆ ಗಣೇಶ ಪೇಟ ವೃತ್ತದಿಂದ ಆರಂಭವಾಗಿ ಚನ್ನಮ್ಮ ವೃತ್ತದ ವರೆಗೆ ಸಾಗಲಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರಾಹುಲ್ ಬೆಳದಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.