

ತುಮಕೂರು: ಜಿಎಸ್‌ಟಿ ಪಾಲು ಸೇರಿ ಕೇಂದ್ರದಿಂದ ಕರ್ನಾಟಕಕ್ಕೆ ಬರಬೇಕಾದ ಅನುದಾನ ನೀಡುವಲ್ಲಿ ಅನ್ಯಾಯವಾಗಿದ್ದರೂ ಬಿಜೆಪಿ ಸಂಸದರು ಮೌನವಾಗಿರುವುದು ರಾಜ್ಯದ ಜನರಿಗೆ ಮಾಡುತ್ತಿರುವ ಅನ್ಯಾಯ ಎಂದು ಮಾಜಿ ಸಂಸದ, ಕೆಪಿಸಿಸಿ ಆರೋಗ್ಯ ಹಸ್ತ ಕಾರ್ಯಕ್ರಮದ ಅಧ್ಯಕ್ಷ ಆರ್.ಧ್ರುವನಾರಾಯಣ ಹರಿಹಾಯ್ದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಕ್ಕೆ ಜಿಎಸ್‌ಟಿ ಪಾಲು 13672 ಕೋಟಿ ರೂ.ಬರಬೇಕು. ಅಲ್ಲದೆ ಎನ್‌ಆರ್‌ಇಜಿಎ ಸೇರಿ ಹಲವು ಯೋಜನೆಗಳ ವ್ಯಾಚಿಂಗ್ ಗ್ರಾೃಂಟ್ ಬಾಕಿ ಇದೆ. ರಾಜ್ಯದವರೇ ಹಣಕಾಸು ಸಚಿವರಾಗಿದ್ದರೂ ಪ್ರಯೋಜನವಾಗಿಲ್ಲ ಎಂದರು.
ಕರೊನಾ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನವಿಲ್ಲದೆ ಕಂಗಾಲಾಗಿದ್ದ ಜನರ ನೆರವಿಗೆ ಧಾವಿಸಲು ಕೆಪಿಸಿಸಿ ಕಾರ್ಯಕ್ರಮ ರೂಪಿಸಿದ್ದು ನಮ್ಮ 15 ಸಾವಿರ ಕಾರ್ಯಕರ್ತರು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಂದ ಕರೊನಾ ವಾರಿಯರ್ಸ್ ಕೆಲಸ ಮಾಡುತ್ತಿದ್ದಾರೆ ಎಂದರು.
ನಮ್ಮ ವಾರಿಯರ್ಸ್‌ಗಳಿಗೆ 4500 ರೂ. ಮೌಲ್ಯದ 7500 ಆರೋಗ್ಯ ಕಿಟ್‌ಗಳನ್ನು ವಿತರಿಸಲಾಗಿದೆ. ವಾರಿಯರ್ಸ್‌ಗಳು ಜಿಲ್ಲೆಯ ಪ್ರತಿ ಮನೆಗೆ ಭೇಟಿ ನೀಡಿ, ಅವರನ್ನು ಪರೀಕ್ಷಿಸಿ ಅವರಿಗೆ ಸೂಕ್ತ ವಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಸಂಯೋಜಕ ವಾಜಿ ಸಂಸದ ಬಿ.ಎನ್.ಚಂದ್ರಪ್ಪ ವಾತನಾಡಿ, ರಾಜ್ಯದ ಪಾಲಿನ ಅನುದಾನ ಸೇರಿ ಹಲವು ರೀತಿಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದ್ದರೂ ರಾಜ್ಯದಿಂದ ಆಯ್ಕೆಯಾದ ಸಂಸದರು ಮಾತನಾಡುತ್ತಿಲ್ಲ, ಅವರಿಗೆ ಜನರ ಬಗ್ಗೆ ಕಾಳಜಿಯೂ ಇಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ವಾಜಿ ಶಾಸಕರಾದ ಆರ್.ನಾರಾಯಣ್, ಡಾ.ರಫೀಕ್‌ಅಹ್ಮದ್, ಜಿಪಂ.ಸದಸ್ಯ ಕೆಂಚವಾರಯ್ಯ, ಹೆಬ್ಬೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಮುಖಂಡರಾದ ಮುರುಳೀಧರ ಹಾಲಪ್ಪ, ಚಂದ್ರಶೇಖರ್,
ಸಿ.ಶಿವಮೂರ್ತಿ ಮತ್ತಿತರರು ಇದ್ದರು.
ಸ್ಥಳೀಯ ಮುಖಂಡರ ಗೈರು!: ಕೆಪಿಸಿಸಿ ವತಿಯಿಂದ ರೂಪಿಸಿರುವ ಕಾರ್ಯಕ್ರಮದ ಅಧ್ಯಕ್ಷರೇ ಜಿಲ್ಲೆಗೆ ಆಗಮಿಸಿದ್ದರೂ ಜಿಲ್ಲೆಯ ಪ್ರಮುಖ ನಾಯಕರು ಕಾಂಗ್ರೆಸ್ ಕಚೇರಿಗೆ ಆಗಮಿಸದೇ ಇದ್ದುದು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸಾರಿತು. ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಟಿ.ಬಿ.ಜಯಚಂದ್ರ ಜತೆಗೆ ಆರ್. ಧ್ರುವನಾರಾಯಣ, ಬಿ.ಎನ್.ಚಂದ್ರಪ್ಪ ಅವರ ಒಡನಾಡಿಯೂ ಆಗಿರುವ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಸೇರಿ ಮುಂಚೂಣಿ ನಾಯಕರು ಗೈರಾಗಿದ್ದು ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿಲ್ಲ ಎಂಬುದನ್ನು ಮತ್ತೊಮ್ಮೆ ಬಹಿರಂಗಪಡಿಸಿತು. ಮಾಜಿ ಶಾಸಕರಾದ ಡಾ.ರಫೀಕ್ ಅಹ್ಮದ್, ಆರ್.ನಾರಾಯಣ ಮಾತ್ರ ಸಭೆಯಲ್ಲಿ ಉಪಸ್ಥಿತರಿದ್ದರು.