ನಮ್ಮ ಮನೆಗೆ ನಾವೇ ಯಜಮಾನರಾಗಬೇಕು

22_04_Mdy_08(Star Chandru)
ನಾಗಮಂಗಲ ತಾಲೂಕಿನ ವಿವಿಧೆಡೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತಯಾಚನೆ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಇತರರಿದ್ದರು.
Published on

ನಾಗಮಂಗಲ: ಸ್ಟಾರ್ ಚಂದ್ರು ಅವರು ಸ್ಥಳೀಯವಾಗಿ ಜನರ ಕೈಗೆ ಸಿಗುತ್ತಾರೆ. ನಮ್ಮ ಮನೆಗೆ ನಾವೇ ಯಜಮಾನರಾಗಬೇಕು. ಪ್ರಮುಖವಾಗಿ ನಮ್ಮ ನಾಗಮಂಗಲ ತಾಲೂಕಿನವರನ್ನು ಸಂಸದರನ್ನಾಗಿ ಮಾಡುವ ಅವಕಾಶ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು(ವೆಂಕಟರಮಣೇಗೌಡ) ಪರ ಮತಯಾಚನೆ ಮಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಶಾಸಕರಾಗಿದ್ದಾರೆ. ಅವರು ಅಲ್ಲಿ ಕೆಲಸ ಮಾಡಲಿ. ಪದೇ ಪದೆ ಕ್ಷೇತ್ರ ಬದಲಾಯಿಸುವುದು ಸರಿಯಲ್ಲ. ಸ್ಥಳೀಯವಾಗಿ ಯಾವುದೇ ಭಿನ್ನಾಭಿಪ್ರಾಯವಿದ್ದರೂ ಬದಿಗೊತ್ತಿ ಸ್ಟಾರ್ ಚಂದ್ರು ಗೆಲುವಿಗೆ ಸಹಕರಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಅಭ್ಯರ್ಥಿ ಸ್ಟಾರ್ ಚಂದ್ರು ಮಾತನಾಡಿ, ನಾಗಮಂಗಲ ತಾಲೂಕಿನ ಜನತೆ ಅತಿ ಹೆಚ್ಚು ಲೀಡ್‌ನಲ್ಲಿ ನನ್ನನ್ನು ಗೆಲ್ಲಿಸಿ, ನಿಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net