

ನರೇಗಲ್ಲ: 75ನೇ ಸ್ವಾತಂತ್ರ್ಯೊತ್ಸವದ ನಿಮಿತ್ತ ಭಾರತದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಾತ್ರ ಬಹು ದೊಡ್ಡದಿದೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಪಕ್ಷವು ಹಲವಾರು ಮಹತ್ತರವಾದ ಕಾರ್ಯಗಳನ್ನು ನೆರವೇರಿಸುತ್ತ ಬಂದಿದೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
75ನೇ ಸ್ವಾತಂತ್ರ್ಯೊತ್ಸವದ ಅಮೃತ ಮಹೋತ್ಸವದ ಪಾದಯಾತ್ರೆಯು ಗುರುವಾರ ನರೇಗಲ್ಲ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಳೇ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾದಯಾತ್ರೆಯು ಕೋಡಿಕೊಪ್ಪ, ಹೊಸ್ ಬಸ್ ನಿಲ್ದಾಣ, ಗ್ರಾಮ ದೇವತೆ ದೇವಸ್ಥಾನ, ಗಣೇಶ ದೇವಸ್ತಾನ, ವೀರಣ್ಣನ ಪಾದಗಟ್ಟಿ, ದರ್ಗಾ, ಮಾರಿಕಾಂಬ ದೇವಸ್ಥಾನ, ಹಳೇ ಬಸ್ ನಿಲ್ದಾಣ, ಜಕ್ಕಲಿ ಕ್ರಾಸ್ ಮೂಲಕ ಸಾಗಿ ಕೋಟುಮಚಗಿ ಗ್ರಾಮಕ್ಕೆ ತೆರಳಿತು.
ನರೇಗಲ್ಲ ಕಾಂಗ್ರೆಸ್ ಅಧ್ಯಕ್ಷ ಶಿವನಗೌಡ ಪಾಟೀಲ, ಅಶೋಕ ಬೇವಿನಕಟ್ಟಿ, ಶರಣಪ್ಪ ಗಂಗರಗೊಂಡ, ಬಸನಗೌಡ ಪೊಲೀಸ್ಪಾಟೀಲ, ವೀರಯ್ಯ ಸೋಮನಕಟ್ಟಿಮಠ, ಎಂ.ಎಸ್. ಧಡೇಸೂರಮಠ, ಮಂಜುನಾಥ ಅಂಗಡಿ, ಬಸವರಾಜ ನವಲಗುಂದ, ವೀರಪ್ಪ ಹರದಾರಿ, ಶೇಖಪ್ಪ ಜುಟ್ಲ, ಮಲ್ಲನಗೌಡ ಪಾಟೀಲ, ಜಗದೀಶ ಹೊನವಾಡ, ಹನುಮಂತಪ್ಪ ದ್ವಾಸಲ, ಡಾ. ಕೆ.ಬಿ. ಧನ್ನೂರ, ವೀರಪ್ಪ ಮಣ್ಣೊಡ್ಡರ, ಕೃಷ್ಣ ಶಾಸ್ತ್ರಿ, ಹಟೇಲ್ಸಾಬ ಲತೀಫಸಾಬನವರ, ಅಲ್ಲಾಭಕ್ಷಿ ನದಾಫ್ ಇದ್ದರು.