

ಮೈಸೂರು: ‘ಹಿಂದು’ ಎಂಬುದು ಅಶ್ಲೀಲ ಶಬ್ದವೆಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ಅವರ ಮತ್ತು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಚುನಾವಣೆ ಬರುತ್ತಿರುವುದರಿಂದ ಈ ರೀತಿ ಹೇಳಿದ್ದಾರೆ. ಹಿಂದು ಧರ್ಮವನ್ನು ಟೀಕಿಸಿದರೆ ಇತರ ಧರ್ಮದವರು ಕಾಂಗ್ರೆಸ್‌ಗೆ ವೋಟು ನೀಡುತ್ತಾರೆಂದು ಅವರು ತಿಳಿದಿದ್ದಾರೆ.