

ಮೈಸೂರು: ರಾಜ್ಯ ಸರ್ಕಾರದ ಸ್ಥಿತಿ ಕುಣಿಲಾರದಳು ನೆಲ ಡೊಂಡು ಎಂಬಾತಾಗಿದೆ ಎಂದು ಸಂಸದ ಪ್ರತಾಪ ಸಿಂಹ ಸರ್ಕಾರದ ವಿರುದ್ಧ ಲೇವಡಿ ಮಾಡಿದರು.
ಕಾಂಗ್ರೆಸ್‌ನವರಿಗೆ ಅಭಿವೃದ್ಧಿ ಮಾಡುವುದು ಗೊತ್ತಿಲ್ಲ, ಲೂಟಿ ಮಾಡುವುದು ಗೊತ್ತು. ಕರ್ನಾಟಕ ಶ್ರೀಮಂತ ರಾಜ್ಯವಾಗಿದ್ದು, ಇಲ್ಲಿ ಹೇಗೆ ಆಡಳಿತ ಮಾಡಬೇಕು ಎಂಬುದು ಗೊತ್ತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ತುಂಬುತ್ತಿರುವುದರಿಂದ ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲದಂತಾಗಿದೆ. ಹಾಗಾಗಿ ರಾಜ್ಯದ ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್‌ನವರು ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನೆಹರು ಅವರು ಪ್ರಧಾನಿಯಾಗಿದ್ದ ಪ್ರೈಟ್ ಇಕ್ವಲಿಜಿಷನ್ ಎಂಬ ಕಾಯ್ದೆ ತಂದರು. ಆ ಕಾಯ್ದೆಯ ಪ್ರಕಾರ ಮೈನ್ ನಮ್ಮಲ್ಲಿ ಸಿಗಲಿ, ಜಾರ್ಖಾಂಡ್, ಒರಿಸ್ಸಾ, ಛತ್ತಿಸ್‌ಗಢ ಸಿಗುತ್ತದೆ. ಅಲ್ಲಿ ಒಂದು ಟನ್ 1 ಸಾವಿರ ಇದ್ದರೆ, ರಾಜ್ಯಕ್ಕೆ ಬರುವಾಗ 5 ಸಾವಿರ ರೂ., ಆಗಲಿದೆ. ಸಾರಿಗೆ ವೆಚ್ಚವಾಗಲಿದೆ. ಆದ್ದರಿಂದ ನೆಹರು ಅವರು ಕಲ್ಲಿದ್ದಲು ನಮ್ಮ ರಾಜ್ಯದಲ್ಲಿಯೂ ಒಂದು ಸಾವಿರಕ್ಕೆ ಸಿಗುವಂತೆ ಮಾಡಿದರು. ಬೇರೆ ರಾಜ್ಯಗಳು ಬೆಳೆಯುವಂತೆ ಮಾಡುವುದು ಇದರ ಉದ್ದೇಶವಾಗಿತ್ತು ಎಂದರು.
ಮೈನ್‌ನಿಂದ ದಕ್ಷಿಣ ಭಾರತ ರಾಜ್ಯಗಳು ಉದ್ದಾರವಾದವು. ಉತ್ತರ ಭಾರತದಲ್ಲಿ ಪಾಕಿಸ್ತಾನ, ಚೀನಾದ ಥ್ರೆಟ್ ಇದ್ದದ್ದರಿಂದ ಎಚ್‌ಎಎಲ್, ಇಸ್ರೋ, ಡಿಆರ್‌ಡಿಒ ಇತ್ಯಾದಿ ಪ್ರತಿಷ್ಠಿತ ಕಂಪನಿಗಳು ದಕ್ಷಿಣ ಭಾರತದಲ್ಲಿವೆ. ಆಗಿನ ಸಂದರ್ಭದಲ್ಲಿ ಪ್ರಮುಖ ಸಂಸ್ಥೆಗಳು ದಕ್ಷಿಣ ಭಾರತಕ್ಕೆ ಬಂದವು. ಇದರಿಂದ ಕೈಗಾರಿಕೆಗಳು ಬೆಳೆದವು, ಉತ್ತರ ಭಾರತದವರಿಂದ ನಾವು ಲಾಭ ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು.
ಜನಸಂಖ್ಯೆ ಆಧಾರದ ಮೇಲೆ, ಆದಾಯವನ್ನು ಕೇಂದ್ರ ಸರ್ಕಾರ ವಿಭಜನೆ ಮಾಡಿ ಹಂಚುತ್ತದೆ. ಇದರ ಸಾಮಾನ್ಯ ಜ್ಞಾನ 14ಬಾರಿ ಬಜೆಟ್ ಮಂಡಿಸಿದವರಿಗೆ ಇರಬೇಕು. ಇದನ್ನು ನಾನು ಹೇಳಿಕೊಡುವ ಅಗತ್ಯವಿಲ್ಲ ಎಂದರು.