ಕಾಂಗ್ರೆಸ್ ಕಾರ್ಯಾಲಯ ಉದ್ಘಾಟನೆ

18 hkr 02
Published on

ಹಿರೇಕೆರೂರ: ಕೇಂದ್ರ ಹಾಗೂ ರಾಜ್ಯದಲ್ಲಿ ಮುಂಬರುವ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಅಧಿಕಾರ ನಡೆಸುವುದು ಶತಸಿದ್ಧವಾಗಿದೆ ಎಂದು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಹೇಳಿದರು.

ಪಟ್ಟಣದ ಶಿರಾಳಕೊಪ್ಪ ರಸ್ತೆಯಲ್ಲಿನ ಷಡಾಕ್ಷರಿ ಬಣಕಾರ ವಾಣಿಜ್ಯ ಮಳಿಗೆಯಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಡಿ.ಕೆ. ಶಿವಕುಮಾರ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಬಿಜೆಪಿಯ ವೈಫಲ್ಯಗಳನ್ನು ಜನರಿಗೆ ಮನದಟ್ಟು ಮಾಡುವ ಮೂಲಕ ಹಳ್ಳಿಗಳು, ಪಟ್ಟಣ ಸೇರಿ ಎಲ್ಲ ಹೋಬಳಿಗಳ ಪ್ರತಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಬೇರುಮಟ್ಟದಲ್ಲಿ ಸಂಘಟಿಸಲು ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದರು.

ಜಿಪಂ ಸದಸ್ಯ ಎಸ್.ಕೆ. ಕರಿಯಣ್ಣನವರ, ಜಿಲ್ಲಾ ಕಾಂಗ್ರೆಸ್ ಘಟಕದ ಕಾರ್ಯದರ್ಶಿ ದುರ್ಗಪ್ಪ ನೀರಲಗಿ, ಪಕ್ಷದ ಮುಖಂಡರಾದ ಎಸ್.ಬಿ. ತಿಪ್ಪಣ್ಣನವರ, ದಿಗ್ವಿಜಯ ಹತ್ತಿ, ಬಸವರಾಜ ಪರಪ್ಪನವರ, ಜಿ.ವಿ. ಕುಲಕರ್ಣಿ, ವಿನಯ ಪಾಟೀಲ, ಸುರೇಶ ಮಡಿವಾಳರ, ಬಿ.ಎಂ. ಬಣಕಾರ, ಆನಂದ ನಾಯ್ಕರ್, ಸಿದ್ದು ತಂಬಾಕದ, ಸರೋಜಮ್ಮ ಮರಡಿ, ಶಶಿಕಲಾ ಆರಿಕಟ್ಟಿ ರಾಜು ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net