ನವರಾತ್ರಿಯಲ್ಲಿ ರಕ್ತದಾನ ಪುಣ್ಯದ ಕಾರ್ಯ: ಸೊರಕೆ

udp-blood
Published on

ಉಡುಪಿ: ದುಷ್ಟ ಶಕ್ತಿಗಳನ್ನು ನಾಶಮಾಡುವ ದೇವಿ ಆರಾಧನೆಯ ನವರಾತ್ರಿಯ ಶುಭ ಸಂದರ್ಭದಲ್ಲಿ ಉಡುಪಿ ಬ್ಲಾಕ್​ ಕಾಂಗ್ರೆಸ್​ ಅನೇಕರ ಜೀವ ಉಳಿಸುವ ರಕ್ತದಾನ ಶಿಬಿರ ಹಮ್ಮಿಕೊಂಡಿದೆ. ತನ್ಮೂಲಕ ನವರಾತ್ರಿ ಹಬ್ಬಕ್ಕೆ ಪುಣ್ಯದ ಕೊಡುಗೆ ನೀಡಿದೆ ಎಂದು ಮಾಜಿ ಸಚಿವ ವಿನಯಕುಮಾರ್​ ಸೊರಕೆ ಹೇಳಿದರು.

ಬ್ಲಾಕ್​ ಕಾಂಗ್ರೆಸ್​ ಸಮಿತಿ ಉಡುಪಿ ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆ ಉಡುಪಿ ಆಶ್ರಯದಲ್ಲಿ ಶುಕ್ರವಾರ ಬೆಳಗ್ಗೆ ಬ್ರಹ್ಮಗಿರಿಯ ಕಾಂಗ್ರೆಸ್​ ಭವನದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ಬೃಹತ್​ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಆಸ್ಪತ್ರೆಯ ಸರ್ಜನ್​ ಡಾ. ವೀಣಾ ಅವರು ಜಿಲ್ಲೆಯ ರೋಗಿಗಳಿಗೆ ರಕ್ತದ ಕೊರತೆ ಆಗದ ರೀತಿಯಲ್ಲಿ ಅನೇಕ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಮಹತ್ಕಾರ್ಯ ಮಾಡುತ್ತಿದ್ದಾರೆ ಎಂದರು.

168 ಜನರಿಂದ ರಕ್ತದಾನ
ರಕ್ತದಾನ ಶಿಬಿರದಲ್ಲಿ 168 ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಬನ್ನಂಜೆಯ ಸುದೇಶ್​ ಶೇಟ್​ 67ನೇ ಸಲ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು. ಕಾಂಗ್ರೆಸ್​ನ ಅನೇಕ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಜಿಲ್ಲಾ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಅಶೋಕಕುಮಾರ್​ ಕೊಡವೂರು, ಉಡುಪಿ ಕಾಂಗ್ರೆಸ್​ ಮುಖಂಡ ಪ್ರಸಾದ್​ರಾಜ್​ ಕಾಂಚನ್​, ದಿನಕರ್​ ಹೇರೂರು, ಬ್ಲಾಕ್​ ಅಧ್ಯಕ್ಷ ರಮೇಶ್​ ಕಾಂಚನ್​, ಕೆಪಿಸಿಸಿ ಸದಸ್ಯೆ ವೆರೆನಿಕಾ ಕರ್ನೇಲಿಯೋ, ಪ್ರಖ್ಯಾತ್​ ಶೆಟ್ಟಿ, ಉಡುಪಿ ಬ್ಲಾಕ್​ ಕಾಂಗ್ರೆಸ್​ ಮಹಿಳಾ ಅಧ್ಯೆ ಮಮತಾ ಶೆಟ್ಟಿ, ಜಿಲ್ಲಾ ಆಸ್ಪತ್ರೆ ಸರ್ಜನ್​ ಡಾ. ವೀಣಾ, ಸಮಾಜ ಸೇವಕ ಈಶ್ವರ ಮಲ್ಪೆ, ಸತೀಶ್​ ಪುತ್ರನ್​ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net