

ಚಿಕ್ಕೋಡಿ: ಪಟ್ಟಣದಲ್ಲಿ ನಿರ್ಮಾಣವಾದ ನಾಗರಮುನ್ನೋಳಿ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನರಿಗೆ ಅನುಕೂಲವಾಗಲಿದೆ. ಜತೆಗೆ ಪ ಸಂಘಟನೆಗಾಗಿ ಸಹಕಾರಿಯಾಗುತ್ತದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ರಾಯಬಾಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗರಮುನ್ನೋಳಿ ಬ್ಲಾಕ್ ಕಾಂಗ್ರೆಸ್ ಕಚೇರಿಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಕೆಪಿಸಿಸಿ ಕಾರ್ಯದರ್ಶಿ ಮಹಾವೀರ ಮೊಹಿತೆ ಸ್ವಂತ ಖರ್ಚಿನಿಂದ ಕಚೇರಿ ನಿರ್ಮಾಣ ಮಾಡಿ ಪಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಹುಕ್ಕೇರಿ, ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಕಾಗವಾಡ, ಸೇರಿ ಎಲ್ಲ ವಿಧಾನಸಭಾ ೇತ್ರಗಳಿಗೆ ಅಭಿವೃದ್ಧಿಗಾಗಿ ಅನುದಾನ ಒದಗಿಸಲಾಗಿದೆ ಎಂದರು. ಕೆಪಿಸಿಸಿ ಕಾರ್ಯದರ್ಶಿ ಮಹಾವೀರ ಮೋಹಿತೆ ಮಾತನಾಡಿ, ಪ ಸಂಟನೆ ಈ ಕಾರ್ಯಾಲಯದ ಉದ್ದೇಶವಾಗಿದೆ ಎಂದರು.
ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ$್ಮಣರಾವ ಚಿಂಗಳೆ, ಸಿದ್ದಪ್ಪ ಮರ್ಯಾಯಿ, ಶಿವು ಪಾಟೀಲ, ಎಚ್.ಎಸ್.ನಸಲಾಪುರೆ, ಪ್ರಭಾಕರ ಕೋರೆ, ರಾಜು ಕೋಟಗಿ, ಶಂಕರಗೌಡ ಪಾಟೀಲ, ರಮೇಶ ಪಾಟೀಲ, ನಿರ್ಮಲಾ ಪಾಟೀಲ, ಗಣೇಶ ಮೋಹಿತೆ, ಶ್ಯಾಮ ರೇವಡೆ, ಸಂತೋಷ ನವಲೆ, ದಿಲೀಪ ಜಮಾದಾರ, ಅರ್ಜುನ ಬಂಡಗರ, ಸುರೇಶ ರಬುಡೆ ಇತರರಿದ್ದರು.