

ಹುಬ್ಬಳ್ಳಿ: ಇಲ್ಲಿಯ ಮಹಾನಗರ ಪಾಲಿಕೆ ಪ್ರತಿಪಕ್ಷ ಕಾಂಗ್ರೆಸ್ ನಾಯಕಿ ಸುವರ್ಣಾ ಕಲ್ಲಕುಂಟ್ಲ ಅವರ ಕಚೇರಿ ಆರಂಭೋತ್ಸವ ಬುಧವಾರ ಸಂಜೆ ಅದ್ದೂರಿಯಾಗಿ ನಡೆಯಿತು.
ಅಲಂಕೃತ ಕಚೇರಿಯಲ್ಲಿ ಪೂಜಾ ಸಮಾರಂಭ ಏರ್ಪಡಿಸಲಾಗಿತ್ತು. ಕಾಮಿರ್ಕ ಸಚಿವ ಸಂತೋಷ್ ಲಾಡ್ ಅವರು ಅಕ್ಷತೆ ಹಾಕುವ ಮೂಲಕ ಕಚೇರಿ ಉದ್ಘಾಟಿಸಿದರು.
ನಂತರ ಪ್ರತಿಪಕ್ಷ ನಾಯಕಿ ಸುವರ್ಣಾ ಕಲ್ಲಕುಂಟ್ಲ ಅವರಿಗೆ ಹೂಗುಚ್ಚ ನೀಡಿ, ಶುಭ ಕೋರಿದರು.
ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ಇತರ ಸದಸ್ಯರು ಪಾಲ್ಗೊಂಡಿದ್ದರು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.
ಕಚೇರಿ ಉದ್ಘಾಟನೆ ನಂತರ ಸಂತೋಷ ಕೂಟ ಏರ್ಪಡಿಸಲಾಗಿತ್ತು. ಪಾಲಿಕೆ ಆವರಣದಲ್ಲಿ ತಯಾರಿಸಲಾದ ಬಾಡೂಟವನ್ನು ಕಾರ್ಯಕ್ರಮಕ್ಕೆ ಆಗಮಿಸಿದವರು ಸವಿದರು.
ಕಳೆದ ಬಾರಿ ಪ್ರತಿಪಕ್ಷದ ನಾಯಕರಾಗಿದ್ದ ದೊರಾಜ ಮಣಿಕುಂಟ್ಲ ಅವರು ಸಹ ಕಚೇರಿ ಉದ್ಘಾಟಿಸಿ, ಬಂದವರಿಗಾಗಿ ಬಾಡೂಟ ಏರ್ಪಡಿಸಿದ್ದರು ಎಂದು ಊಟ ಸವಿದವರು ಸ್ಮರಿಸಿಕೊಂಡರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸಂತೋಷ ಲಾಡ್ ಅವರು, ಸರ್ಕಾರಿ ಕಚೇರಿ ಆವರಣದಲ್ಲಿ ಊಟ ಮಾಡಬಾರದು, ಅಡುಗೆ ಮಾಡಬಾರದೆಂದು ಎಲ್ಲಿ ಹೇಳಿದೆ? ಎಂದು ಸಮರ್ಥಿಸಿಕೊಂಡರು.