ಡಿಸಿಸಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ಶಾಸಕರು ಭಾಗಿ, ಬಿಜೆಪಿ ವಿರೋಧ

klr dcc
ಕೋಲಾರ ಡಿಸಿಸಿ ಬ್ಯಾಂಕ್​
Published on

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಸಹಕಾರಿ ಬ್ಯಾಂಕ್​ನಿಂದ ಕಾಂಗ್ರೆಸ್​ನವರನ್ನು ದೂರ ಮಾಡದೇ ಹೋದರೆ ಎರಡೂ ಜಿಲ್ಲೆಗಳಲ್ಲಿ ಬಿಜೆಪಿ ಗೆಲುವು ಕಷ್ಟವಾಗುತ್ತದೆ ಎಂಬ ಚರ್ಚೆಗಳು ಬಿಜೆಪಿಯಲ್ಲಿ ಆರಂಭವಾಗಿವೆ.


ಮಹಿಳಾ ಸಂಗಳಿಗೆ ಸಾಲ ಕೊಡುವುದನ್ನು ತಡೆದರೆ ನಮಗೂ ತೊಂದರೆಯಾಗುತ್ತದೆ. ಆದ್ದರಿಂದ ಸರ್ಕಾರದ ಮೇಲೆ ಒತ್ತಡ ತಂದು ಸಾಲ ನೀಡುವ ಕಾರ್ಯಕ್ರಮಕ್ಕೆ ಕಾಂಗ್ರೆಸ್​ ಶಾಸಕರು ಹೋಗದಂತೆ ತಡೆಯಬೇಕು ಎಂದು ಮುಖಂಡರ ಅಭಿಪ್ರಾಯವಾಗಿದೆ.


ಮುಖ್ಯಮಂತ್ರಿಗಳ ಒಂದು ವರ್ಷದ ಸಾಧನಾ ಸಮಾವೇಶಕ್ಕಾಗಿ ಸೋಮವಾರ ಶ್ರೀನಿವಾಸಪುರಕ್ಕೆ ಆರೋಗ್ಯ ಸಚಿವ ಕೆ.ಸುಧಾಕರ್​, ವಿಧಾನ ಪರಿಷತ್​ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಹಾಗೂ ಜಿಲ್ಲೆಯ ಬಿಜೆಪಿ ಮುಖಂಡರು ಆಗಮಿಸಿದ್ದ ವೇಳೆ ಜಿಲ್ಲಾಧ್ಯ ಡಾ.ವೇಣುಗೋಪಾಲ್​ ಮನೆಯಲ್ಲಿ ಏರ್ಪಡಿಸಲಾಗಿದ್ದ ಔತಣ ಕೂಟದ ನಂತರ ಡಿಸಿಸಿ ಬ್ಯಾಂಕ್​ ಬಗ್ಗೆ ಬಿಜೆಪಿ ನಾಯಕರು ಚರ್ಚೆ ನಡೆಸಿದರು. ಈ ವೇಳೆ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಸಾಲ ವಿತರಣೆ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯರು ಕಾಂಗ್ರೆಸ್​ ಶಾಸಕರನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಮುಂದಿನ 2023ರ ಚುನಾವಣೆಗೆ ತೊಂದರೆಯಾಗುತ್ತದೆ. ಆದ್ದರಿಂದ ಇದನ್ನು ತಡೆಯಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್​ ಅವರಿಗೆ ತಿಳಿಸಲಾಗಿದೆ. ಅವರು ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು ಎಂದಿದ್ದಾರೆ ಎಂದರು.


ಇತ್ತೀಚೆಗೆ ಡಿಸಿಸಿ ಬ್ಯಾಂಕ್​ ಅಧ್ಯ ಗೋವಿಂದಗೌಡರ ಬಗ್ಗೆ ಮೃದು ಧೋರಣೆ ಹೊಂದಿರುವ ಸಚಿವ ಕೆ.ಸುಧಾಕರ್​, ರಮೇಶ್​ ಕುಮಾರ್​ ಸೇರಿ ಕಾಂಗ್ರೆಸ್​ ಶಾಸಕರೇ ಗೋವಿಂದಗೌಡರಿಗೆ ಗೂಸಾ ನೀಡಿದ್ದಾರೆ. ಅವರೇ ದೂರ ಸರಿಯುವ ದಿನಗಳು ದೂರವಿಲ್ಲ ಎಂದಾಗ ಕೆಜಿಎಫ್​ ಮಾಜಿ ಶಾಸಕ ವೈ.ಸಂಪಂಗಿ, ಇದನ್ನು ತಡೆಯಲೇಬೇಕು, ಇಲ್ಲದಿದ್ದರೆ ಜಿಲ್ಲೆಯಲ್ಲಿ ಒಂದು ಸ್ಥಾನವನ್ನೂ ಗೆಲ್ಲಲು ಕಷ್ಟವಾಗುತ್ತದೆ ಎಂದರು. ಅದಕ್ಕೆ ಮಾಜಿ ಸಚಿವ ವರ್ತೂರು ಪ್ರಕಾಶ್​ ಇತರರು ಧ್ವನಿಗೂಡಿಸಿದ್ದಾರೆ.
ಡಿಸಿಸಿ ಬ್ಯಾಂಕ್​ ಬಗ್ಗೆ ಸಂಸದ ಮುನಿಸ್ವಾಮಿ, ಮಾಜಿ ಶಾಸಕ ಸಂಪಂಗಿ, ಜೆಡಿಎಸ್​ ಜಿಲ್ಲಾಧ್ಯ ವೆಂಕಟಶಿವಾರೆಡ್ಡಿ, ಸಚಿವ ಸುಧಾಕರ್​ ಎಲ್ಲರೂ ಮುಗಿ ಬೀಳುತ್ತಿದ್ದರು. ಕಳೆದ ಎಂಎಲ್​ಸಿ ಚುನಾವಣೆಯ ನಂತರ ಸಚಿವ ಸುಧಾಕರ್​ ಹಾಗೂ ಜಿ.ಕೆ.ವೆಂಕಟಶಿವಾರೆಡ್ಡಿ ಮೃದುಧೋರಣೆ ತೋರಿದ್ದು, ವೈ.ಎ ನಾರಾಯಣಸ್ವಾಮಿ ಸಮರ ಸಾರಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ವೈ.ಎ.ನಾರಾಯಣಸ್ವಾಮಿ ಡಿಸಿಸಿ ಬ್ಯಾಂಕ್​ ಕಥೆ ಚುನಾವಣೆ ಒಳಗಾಗಿ ಮುಗಿಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net