

ತುಮಕೂರು: ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಅಭ್ಯರ್ಥಿ ಯಾರು ಎಂದೂ ಇನ್ನೂ ಅಂತಿಮ ಆಗಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ನಡೆಯುತ್ತಲೇ ಇದೆ. ಇದೀಗ ಕಾಂಗ್ರೆಸ್ನ ಹಿರಿಯ ಶಾಸಕ ಡಾ.ಜಿ.ಪರಮೇಶ್ವರ ಕೂಡ ಸಿಎಂ ರೇಸ್ನಲ್ಲಿದ್ದಾರೆ. ಎರಡು ಸಲ ಸಿಎಂ ಆಗುವ ಅವಕಾಶದಿಂದ ವಂಚಿತನಾಗಿದ್ದೇನೆ, ಅದೃಷ್ಟವಿದ್ದರೆ ಮುಂದಿನ ಬಾರಿ ಸಿಎಂ ಆಗುತ್ತೇನೆ. ಈ ವಿಶ್ವಾಸವಿದೆ ಎಂದು ಸ್ವಪಕ್ಷೀಯರಿಗೆ ಸಂದೇಶ ರವಾನಿಸಿದ್ದಾರೆ.
ತಾವು ಸಿಎಂ ಆಗುವ ಆಸೆಯನ್ನು ಪದೇಪದೆ ಪುನರುಚ್ಚರಿಸುತ್ತಿರುವ ಪರಮೇಶ್ವರ್, ಮಧುಗಿರಿ ತಾಲೂಕು ಪುರವರ ಹೋಬಳಿ ತಗ್ಗಿಹಳ್ಳಿ ರಾಮಕೃಷ್ಣ ಆಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭದಲ್ಲೂ ಸಿಎಂ ಆಗುವ ಆಸೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ.
ಎರಡು ಸಲ ಸಿಎಂ ಆಗುವ ಅವಕಾಶದಿಂದ ವಂಚಿತನಾಗಿದ್ದೇನೆ, ಅದೃಷ್ಟವಿದ್ದರೆ ಮುಂದಿನ ಬಾರಿ ಸಿಎಂ ಆಗುತ್ತೇನೆ. ಈ ವಿಶ್ವಾಸವಿದೆ ಎಂದು ಸ್ವಪಕ್ಷೀಯರಿಗೆ ಸಂದೇಶ ರವಾನಿಸಿದ್ದಾರೆ. ಉತ್ತರ ಪ್ರದೇಶದ ಮಥುರಾ ಮಹಾಮಂಡಲೇಶ್ವರ ಕಾಷಿರ್ಣಿ ಶ್ರೀಗುರುಶರಣ ನಂದಜೀ ಅವರ ಸಮ್ಮುಖದಲ್ಲಿಯೇ ಪರಮೇಶ್ವರ ಮನದಾಳದ ಇಂಗಿತ ವ್ಯಕ್ತಪಡಿಸಿದ್ದು, ರಾಜಕೀಯ ವಲಯದಲ್ಲಿ ವಿವಿಧ ಚರ್ಚೆಗೆ ಗ್ರಾಸವಾಗಿದೆ. ಉತ್ತರ ಪ್ರದೇಶದ ಮಥುರಾ ಮಹಾಮಂಡಲೇಶ್ವರ ಕಾಷಿರ್ಣಿ ಶ್ರೀಗುರುಶರಣನಂದಜೀ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಶ್ರೀವಿರೇಶಾನಂದಜೀ, ತಗ್ಗಿಹಳ್ಳಿ ಆಶ್ರಮದ ಸ್ವಾಮಿ ರಮಾನಂದಜೀ ಮತ್ತಿತರರು ಇದ್ದರು.