ವಿದ್ಯುತ್ ದರ ಹೆಚ್ಚಳಕ್ಕೆ ವಿರೋಧ

web 2
Published on

ಚಿಕ್ಕಮಗಳೂರು: ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ನಗರದ ಮೆಸ್ಕಾಂ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ, ಸರ್ಕಾರ ಆರು ವರ್ಷದಿಂದ ದೇಶದಲ್ಲಿ ನಿರಂತರವಾಗಿ ವಸ್ತು ಬೆಲೆ ಏರಿಕೆ ಮಾಡುವ ಮೂಲಕ ಜನರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಗೆ ಮಾಡಿದ್ದ ಬಿಜೆಪಿ ವಿದ್ಯುತ್ ದರ ಏರಿಸಿ ಜನರಿಗೆ ಶಾಕ್ ನೀಡಿದೆ. ಏಳೆಂಟು ತಿಂಗಳಿಂದ ರೈತರು ಸ್ಥಿತಿ ಚಿಂತಾಜನಕವಾಗಿದೆ, ವ್ಯಾಪಾರ , ಉದ್ಯೋಗವಿಲ್ಲ, ಸಣ್ಣ ಕೈಗಾರಿಕೆಗಳು ಮುಚ್ಚಿವೆ. ಈ ವೇಳೆ ವಿದ್ಯುತ್ ದರ ಏರಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರೊನಾ ಟಾಸ್ಕ್​ಫೋಸ್ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದೆ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜನ ಬಿಜೆಪಿಯನ್ನು ತಿರಸ್ಕರಿಸದಿದ್ದರೆ ವಿದ್ಯುತ್ ಬದಲು ದೀಪ ಹಚ್ಚಿ ಜೀವನ ಸಾಗಿಸುವ ಸ್ಥಿತಿ ಬರಲಿದೆ ಎಂದು ದೂರಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ವಿದ್ಯುತ್ ದರ ಏರಿಸಿ ಬಡವರು, ರೈತರು, ಕೈಗಾರಿಕೋದ್ಯಮಿಗಳಿಗೆ ತೊಂದರೆ ನೀಡಿರುವ ಸರ್ಕಾರ ವಿದ್ಯುತ್ ಬೆಲೆ ಇಳಿಸುವವರೆಗೂ ನಿರಂತರವಾಗಿ ಹೋರಾಟ ರೂಪಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net