ಆ.16 ರಿಂದ ಕಾಂಗ್ರೆಸ್ ಸದಸ್ಯತ್ವ ನೋಂದಣಿಗೆ ಚಾಲನೆ

11
Published on

ಮೈಸೂರು: ರಾಜ್ಯ ಯುವ ಕಾಂಗ್ರೆಸ್ ಚುನಾವಣೆ ಸಂಬಂಧ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಭಿತ್ತಪತ್ರ ಬಿಡುಗಡೆಗೊಳಿಸಲಾಯಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿ, ಚುನಾವಣೆ ಸಂಬಂಧ ಜುಲೈ 24 ರಿಂದ ಆಗಸ್ಟ್ 2ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 16 ರಿಂದ ಸೆಪ್ಟೆಂಬರ್ 16ರ ವರೆಗೆ ಸದಸ್ಯತ್ವ ನೋಂದಣಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸದಸ್ಯತ್ವ ನೋಂದಣಿಗೆ 50 ರೂ. ಶುಲ್ಕ ನಿಗದಿ ಪಡಿಸಲಾಗಿದೆ. ಬ್ಲಾಕ್ ಸಮಿತಿಗೆ 17, ವಿಧಾನಸಭಾ ಸಮಿತಿಗೆ 27, ಜಿಲ್ಲಾ ಸಮಿತಿಗೆ 27, ರಾಜ್ಯ ಸಮಿತಿಗೆ 57 ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಕ್ರಿಮಿನಲ್ ಹಿನ್ನೆಲೆ ಇರುವ ಯುವಕರಿಗೆ ಸದಸ್ಯತ್ವ ರದ್ದುಪಡಿಸುವ ಅಧಿಕಾರ ಪಕ್ಷಕ್ಕೆ ಇದೆ. ಈ ಬಾರಿಯ ಚುನಾವಣಾ ಪದ್ಧತಿಯಲ್ಲಿ ಹೊಸ ಪ್ರಕ್ರಿಯೆ ಅಳವಡಿಸಿಕೊಂಡಿದ್ದು, ಹೆಚ್ಚು ನೋಂದಣಿ ಮಾಡಿಸಿದವರು ಚುನಾವಣೆಯನ್ನು ಜಯಿಸಬಹುದು ಎಂದು ಹೇಳಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಮೈಸೂರು ವಿಭಾಗೀಯ ಯುವ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಪಾಂಡಿಚೆರಿಯ ಕಾಳಿಮುತ್ತು, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಯುವ ಕಾಂಗ್ರೆಸ್ ನಗರಾಧ್ಯಕ್ಷ ಅಬ್ರಾರ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಹಿನಕಲ್ ಮಂಜು, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹ್ಯಾರಿಸ್, ಮುಖಂಡರಾದ ಹಂಸದ್ ಖಾನ್, ಮೊಸಿನ್ ಖಾನ್, ಸಂತೋಷ್ ಮಳಿಯೂರು, ಪ್ರವೀಣ್, ರಫೀಕ್ ಆಲಿಖಾನ್, ಚಂದ್ರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net