ಲೋಕಸಭೆ ಚುನಾವಣೆಗೆ ಸಂಘಟಿತರಾಗಿ

26arsph2ep
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಬಿ.ಶಿವರಾಮು ಮಾತನಾಡಿದರು. ರಘು, ಮಾಡಾಳು ಸ್ವಾಮಿ, ಅಜಯ್, ರಮೇಶ್, ಜವನಪ್ಪ, ರಘು, ಸಮೀರ್, ಶಿವರಾಜ್, ಅಯ್ಯಪ್ಪ, ಜಗದೀಶ್ ಇತರರಿದ್ದರು.
Published on

ಅರಸೀಕೆರೆ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾಯಕರ್ತರು ಸಂಘಟನೆಗೆ ಮುಂದಾಗಬೇಕು ಎಂದು ಮಾಜಿ ಸಚಿವ ಬಿ.ಶಿವರಾಮು ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಜನಪರ ಆಡಳಿತ ನೀಡುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಪ್ರಮುಖ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಮಾತಿನಂತೆ ಈಡೇರಿಸಲಾಗಿದೆ. ಯುವ ಸಮುದಾಯಕ್ಕೆ ನೆರವಾಗಲು ಯುವನಿಧಿ ಕೂಡ ಜನವರಿ ಎರಡನೇ ವಾರದಲ್ಲಿ ಜಾರಿಯಾಗಲಿದೆ. ಇಂತಹ ಜನಪರ ಕಾರ್ಯಕ್ರಮಗಳನ್ನು ಮನೆ ಮನೆಗೆ ತಿಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂಬುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.

ಬಿಜೆಪಿ ಸರ್ಕಾರದ ಎರಡು ಅವಧಿಯ ವೈಫಲ್ಯವನ್ನು ಮುಂದಿಟ್ಟು ಮತಯಾಚನೆ ಮಾಡೋಣ. ಪಕ್ಷದ ವರಿಷ್ಠರು ಹಾಗೂ ಹೈಕಮಾಂಡ್ ಅವಕಾಶ ನೀಡಿದರೆ ಕಣಕ್ಕಿಳಿಯಲು ಸಿದ್ಧ್ದನಿದ್ದೇನೆ ಎಂದರು. ಜಿಪಂ ಮಾಜಿ ಸದಸ್ಯ ಮಾಡಾಳು ಸ್ವಾಮಿ, ದುಮ್ಮೇನಹಳ್ಳಿ ಗ್ರಾಪಂ ಅಧ್ಯಕ್ಷ ಅಜಯ್, ಮಾಜಿ ಅಧ್ಯಕ್ಷರಾದ ಶಾನೆಗೆರೆ ರಮೇಶ್, ಜವನಪ್ಪ, ಮುಖಂಡರಾದ ಚಗಚಗೆರೆ ರಾಮಚಂದ್ರು, ಹುಲ್ಲೇನಹಳ್ಳಿ ರಘು, ಸಮೀರ್, ಶಿವರಾಜ್, ಅಯ್ಯಪ್ಪ, ಜಗದೀಶ್, ಲೋಹಿತ್, ಶ್ರೀನಿವಾಸ್, ಯೂನಿಸ್, ಮಾಡಾಳು ರಂಗನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net