ಬಿಜೆಪಿಯಿಂದ ಜನವಿರೋಧಿ ಆಡಳಿತ: ಕಾಂಗ್ರೆಸ್ ಶಿಕ್ಷಕರ ವಿಭಾಗದ ಜಿಲ್ಲಾಧ್ಯಕ್ಷ ಸಿದ್ದಲಿಂಗು ವಾಗ್ದಾಳಿ

Congress)
Published on

ಮಂಡ್ಯ: ರಾಜ್ಯದ ಜನರು ಬಿಜೆಪಿ ಸರ್ಕಾರದ ಜನವಿರೋಧಿ ಆಡಳಿತದಿಂದ ಬೇಸತ್ತಿದ್ದಾರೆ ಎಂದು ಕಾಂಗ್ರೆಸ್ ಶಿಕ್ಷಕರ ವಿಭಾಗದ ಜಿಲ್ಲಾಧ್ಯಕ್ಷ ಸಿದ್ದಲಿಂಗು ವಾಗ್ದಾಳಿ ನಡೆಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಘಟಕದ ಜಿಲ್ಲಾ ಪದಾಧಿಕಾರಿಗಳ ಸಮಿತಿ ರಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮಾಜಿಕ ಬದ್ಧತೆಯನ್ನು ಕಾಪಾಡುವಂತಹ ಹಾಗೂ ಎಲ್ಲ ಸಮುದಾಯದ ನಡುವೆ ಸಾಮರಸ್ಯ ಮೂಡಿಸುವಂತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ. ಕಾಂಗ್ರೆಸ್‌ನಿಂದ ಮಾತ್ರ ಜನರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳು ಬರಲು ಸಾಧ್ಯ ಎಂದರು.

ಪದಾಧಿಕಾರಿಗಳ ಆಯ್ಕೆ: ಡಾ.ಬಿ.ವಿ.ಶ್ರೀನಿವಾಸಮೂರ್ತಿ ಹಾಗೂ ಮುದ್ದಮ್ಮ(ಉಪಾಧ್ಯಕ್ಷರು), ಕೆ.ಬಿ.ಶಿವರಾಮು(ಕಾರ್ಯದರ್ಶಿ), ಡಿ.ವೆಂಕಟೇಶಯ್ಯ(ಖಜಾಂಚಿ), ಜವರೇಗೌಡ ಕಾಡೇನಹಳ್ಳಿ, ಕೆ.ವೆಂಕಟಶೆಟ್ಟಿ ಹಾಗೂ ಎಚ್.ಕೆ.ಮಾದೇಗೌಡ(ಸಂಚಾಲಕರು), ತಮ್ಮಣ್ಣ, ನಟರಾಜು(ಸಂಘಟನಾ ಕಾರ್ಯದರ್ಶಿ), ನಾಗರಾಜು ಹಾಗೂ ಅಶ್ವತ್‌ಕುಮಾರ್(ಸಹ ಕಾರ್ಯದರ್ಶಿ)ಯನ್ನಾಗಿ ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net