ಕಾಂಗ್ರೆಸ್ ಸೇರಿದ ಹಿರಿಯ ಸಹಕಾರಿ: ಸಿಆರ್‌ಎಸ್ ಸಮ್ಮುಖದಲ್ಲಿ ಕೌಡ್ಲೆ ಚನ್ನಪ್ಪ ಸೇರ್ಪಡೆ

Congress)
Published on

ಮದ್ದೂರು: ಹಿರಿಯ ಸಹಕಾರಿ ಹಾಗೂ ಜನತಾ ಪರಿವಾರದ ಹಿರಿಯ ಮುಖಂಡ ಕೌಡ್ಲೆ ಚನ್ನಪ್ಪ ಅವರು ಕೆಪಿಸಿಸಿ ಉಪಾಧ್ಯಕ್ಷರೂ ಆದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ತಾಲೂಕಿನ ಕೌಡ್ಲೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚನ್ನಪ್ಪ ಹಾಗೂ ಜೆಡಿಎಸ್ ಮುಖಂಡರಾದ ಕ್ರಾಂತಿ ಸಿಂಹ, ಬೆಟ್ಟಸ್ವಾಮಿ ಅವರಿಗೆ ಪಕ್ಷದ ಶಾಲು ಹೊದಿಸುವ ಮೂಲಕ ಸಿಆರ್‌ಎಸ್ ಕಾಂಗ್ರೆಸ್‌ಗೆ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಚಲುವರಾಯಸ್ವಾಮಿ, ರಾಜ್ಯದ ಜನರಿಗೆ ಅನುಕೂಲವಾಗುವಂತಹ ಹಲವು ಮಹತ್ವದ ಯೋಜನೆಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ಅಧಿಕಾರಕ್ಕೆ ಬಂದ ತಕ್ಷಣವೇ ಎಲ್ಲವನ್ನೂ ಈಡೇರಿಸಲಾಗುವುದು. ಅಂತೆಯೇ ಜೆಡಿಎಸ್, ಬಿಜೆಪಿಯ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಜನಬೆಂಬಲ ಗೋಚರಿಸುತ್ತಿದೆ. ನಮ್ಮ ಕಾರ್ಯಕರ್ತರು ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕು ಎಂದರು.

ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಜೋಗಿಗೌಡ, ನಿವೃತ್ತ ಡಿಸಿ ಕೃಷ್ಣೇಗೌಡ, ತಾಪಂ ಮಾಜಿ ಅಧ್ಯಕ್ಷರಾದ ಶ್ರೀನಿವಾಸ್, ತ್ಯಾಗರಾಜು, ಕುಮಾರ್‌ಕೊಪ್ಪ, ನಾರಾಯಣಸ್ವಾಮಿ, ಶ್ರೀಧರ್, ರಮೇಶ್, ರವಿ, ಗ್ರಾಪಂ ಅಧ್ಯಕ್ಷೆ ಉಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net