ಬೂತ್​ ಮಟ್ಟದಲ್ಲಿ ಪಕ್ಷ ಸಂಘಟನೆ: ಸೌಮ್ಯ ರೆಡ್ಡಿ

udp-11-congress
Published on

ಉಡುಪಿ: ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷಿ$್ಮ ಯೋಜನೆ ಮೂಲಕ ರಾಜ್ಯಸರ್ಕಾರ 1.22 ಕೋಟಿ 2 ಸಾವಿರ ರೂ. ನೀಡುತ್ತಿದ್ದು, ಇದರಿಂದ ಮಹಿಳೆಯರು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿದೆ. ಪ್ರತಿ ಜಿಲ್ಲೆಯಲ್ಲಿ 50 ರಿಂದ 70 ಸಾವಿರ ಗ್ಯಾರೆಂಟಿ ಯೋಜನೆ ಲಾನುಭವಿಗಳಿದ್ದು, ಎಲ್ಲರನ್ನೂ ಭೇಟಿ ಮಾಡಿ, ಬೂತ್​ ಮಟ್ಟದಲ್ಲಿ ಪಕ್ಷ ಸಂಟನೆ ಕೆಲಸ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆ ಸೌಮ್ಯ ರೆಡ್ಡಿ ಹೇಳಿದರು.

ಶುಕ್ರವಾರ ಜಿಲ್ಲಾ ಕಾಂಗ್ರೆಸ್​ ಕಚೇರಿ ಆವರಣದಲ್ಲಿ ಗಾಂಧಿ ಭಾರತ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಬ್ರೀಟಿಷರಿಂದ ಸ್ವಾತಂತ್ರ$್ಯ ದೊರಕಿಸಿಕೊಟ್ಟ ಪಕ್ಷ ಕಾಂಗ್ರೆಸ್​. ಸಂವಿಧಾನದಿಂದ ಪ್ರತಿಯೊಬ್ಬರಿಗೂ ಸಮಾನತೆ ಲಭಿಸಿದೆ. ಆದರೆ ಬಿಜೆಪಿ ಬ್ರ್ರಿಟಿಷರ ಒಡೆದು ಆಳುವ ಪದ್ಧತಿ ಅನುಸರಿಸುತ್ತಿದ್ದು, ಜಾತಿ ಧರ್ಮ ವಿಷಬೀಜ ಬಿತ್ತಿ ದೇಶ ಹಾಳು ಮಾಡಲು ಹೊರಟಿದೆ. ಹೆಚ್ಚಿನ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್​ ಪಕ್ಷ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತಿದ್ದು, ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಬದಲಾವಣೆ ತರಲು ಸಾಧ್ಯ ಎಂದರು.

ಅದಾನಿಗೆ ಅಚ್ಚೇ ದಿನ್​

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಇಳಿಕೆಯಾಗಿದ್ದರೂ ಕೇಂದ್ರ ಸರ್ಕಾರ ಗ್ಯಾಸ್​ ಬೆಲೆ ಏರಿಕೆ ಮಾಡಿದೆ. ಇದರಿಂದ ಬಡವರಿಗೆ ಮಧ್ಯಮ ವರ್ಗದವರಿಗೆ ಮಹಿಳೆಯರಿಗೆ ತೊಂದರೆಯಾಗಿದೆ. ಅಂಬಾನಿ ಮತ್ತು ಅಧಾನಿಗೆ ಮಾತ್ರ ಅಚ್ಚೆ ದಿನ ಬಂದಿದೆ ಎಂದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಅಶೋಕ್​ ಕುಮಾರ್​, ಮಾಜಿ ಸಚಿವ ವಿನಯಕುಮಾರ್​ ಸೊರಕೆ, ಪ್ರಸಾದ್​ ಕಾಂಚನ್​, ಉದಯ್​ ಕುಮಾರ್​ ಶೆಟ್ಟಿ ಮುನಿಯಾಲು, ಕಿರಣ್​ ಹೆಗ್ಡೆ, ದಿನೇಶ್​ ಹೆಗ್ಡೆ, ಕೃಷ್ಣ ಶೆಟ್ಟಿ ಬಜಗೋಳಿ, ಮಹಿಳಾ ಕಾಂಗ್ರೆಸ್​ ಅಧ್ಯೆ ಗೀತಾ ವಾಗ್ಲೆ, ಪ್ರಮುಖರಾದ ಜ್ಯೋತಿ ಹೆಬ್ಬಾರ್​, ವೆರೊನಿಕಾ ಕರ್ನೆಲಿಯೋ, ಮಮತಾ ಶೆಟ್ಟಿ, ರೋಶನಿ ಒಲವಿರಾ, ಮೀನಾ ಮಾಧವ ಬನ್ನಂಜೆ, ಚಂದ್ರಿಕಾ ಶೆಟ್ಟಿ, ಡಾ, ಸುನೀತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಬ್ರಹ್ಮಗಿರಿ ಸರ್ಕಲ್​ನಲ್ಲಿ ಮಹಿಳಾ ಕಾಂಗ್ರೆಸ್​ ವತಿಯಿಂದ ಕೇಂದ್ರ ಸರ್ಕಾರ ಗ್ಯಾಸ್​ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಮಹಿಳೆಯರು ಗ್ಯಾಸ್​ ಸಿಲಿಂಡರ್​ ತಲೆಯಲ್ಲಿ ಹೊತ್ತು ಪ್ರತಿಭಟನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net