

ಮೈಸೂರು: ಕಟ್ಟಬೇಕಾದ ಬಾಡಿಗೆ ಕಟ್ಟದಿದ್ದರೆ ಮಾಲಕರು ಬಂದು ವಿಚಾರಿಸುತ್ತಾರೆ. ಜಾಗದ ಮಾಲಕರು ಬಂದಾಗ ಬಾಡಿಗೆಗಿರುವ ವ್ಯಕ್ತಿ ತಗ್ಗಿ ಬಗ್ಗಿ ನಡೆಯುವುದು ಸಹಜ. ಆದರೆ ಇಲ್ಲಿ 'ನೀವು 'ಬಾಡಿಗೆ ಕಟ್ಟಿಲ್ಲ. ಆದಷ್ಟು ಬೇಗನೆ ಕಟ್ಟಿ ಬಿಡಿ' ಎಂದು ನೋಟೀಸ್ ನೀಡಿದ್ದ ಅಧಿಕಾರಿಗಳ ಮೇಲೆ ಈ ವ್ಯಕ್ತಿಯ ಪತ್ನಿ ಮಚ್ಚು ಎತ್ತಿದ್ದಾಳೆ!
ಈತ ಕಾಂಗ್ರೆಸ್ ನಾಯಕ. ಮೈಸೂರಿನಲ್ಲಿ ಶಫಿ ಎನ್ನುವ ಈ ಕಾಂಗ್ರೆಸ್ ನಾಯಕ ಕಾಲೇಜು ನಡೆಸಲು ಕಟ್ಟಡ ಬಾಡಿಗೆಗೆ ಪಡೆದಿದ್ದ. ಆದರೆ ಈ ಭೂಪ ಅನೇಕ ಸಮಯದಿಂದ ಬಾಡಿಗೆ ಕಟ್ಟಿರಲಿಲ್ಲ. ಇದರಿಂದಾಗಿ ಪಾವತಿಸಬೇಕಾದ ಒಟ್ಟು ಬಾಕಿ ಮೊತ್ತ 1 ಕೋಟಿ 80 ಲಕ್ಷವನ್ನೂ ಮೀರಿತ್ತು.
ಬಾಕಿ ಹಣವನ್ನು ಇನ್ನಾದರೂ ವಾಪಸ್ ಕೊಡಲಿ ಎಂದು ಡಿಪೊ ಅಧಿಕಾರಿಗಳು ಶಫಿಗೆ ಸ್ಥಳಕ್ಕೆ ಬಂದು ನೋಟೀಸ್ ನೀಡಿದ್ದಾರೆ. ಇಷ್ಟಕ್ಕೇ ಸಿಟ್ಟುಗೊಂಡ ದಂಪತಿ, ಡಿಪೋಗೆ ತೆರಳಿ ರಂಪಾಟ ಮಾಡಿದ್ದಾರೆ. ಈ ಸಂದರ್ಭ ರೊಚ್ಚಿಗೆದ್ದ ಶಫಿ ಪತ್ನಿ, ಅಧಿಕಾರಿಗಳ ಮೇಲೆ ಹಲ್ಲೆ ಮಾಡಲು ಮಚ್ಚು ಎತ್ತಿದ್ದಾಳೆ. ಇದಿಷ್ಟೇ ಸಾಲಲ್ಲ ಎಂದು ಅಧಿಕಾರಿಗಳನ್ನು ಅಆಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆರ ಮಾಡಿದ್ದಾರೆ.
ಈ ದಂಪತಿಯ ರಂಪಾಟವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ. ಹಿಡಿದಿದ್ದಾರೆ. ಈಗ ದಂಪತಿ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ದಂಪತಿ ತಲೆ ಮರೆಸಿಕೊಂಡಿದ್ದಾರೆ.