ಕಾಂಗ್ರೆಸ್ ನಾಯಕರನ್ನೂ ಮಾಡಬೇಕಿದೆ ಗಡಿಪಾರು

b y vijayendra
ಶಾಸಕ ಬಿ.ವೈ.ವಿಜಯೇಂದ್ರ
Published on

ಶಿವಮೊಗ್ಗ: ದೇಶದ್ರೋಹಿಗಳನ್ನು ಮಾತ್ರ ಗಡಿಪಾರು ಮಾಡಿದರೆ ಸಾಲದು. ಅವರನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ನಾಯಕರನ್ನೂ ಗಡಿಪಾರು ಮಾಡಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ಶಿವಮೊಗ್ಗದಲ್ಲಿ ಗುರುವಾರ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಸಮಾಜ ಶಾಂತಿಯಿಂದ ಇದೆ ಎಂದರೆ ಅದು ದೌರ್ಬಲ್ಯವಲ್ಲ. ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಹಿಂದು ಅಮಾಯಕರ ಮೇಲೆ ದೌರ್ಜನ್ಯ ನಡೆದಿದೆ. ಮುಸ್ಲಿಮರ ತುಷ್ಟೀಕರಣಕ್ಕಾಗಿ ಹಿಂದುಗಳ ತಾಳ್ಮೆ ಪರೀಕ್ಷಿಸಬಾರದು ಎಂದರು.
ಹಿಂದುಗಳ ಪರವಾಗಿದ್ದೇವೆ ಎಂದರೆ ಅಲ್ಪಸಂಖ್ಯಾತರ ವಿರೋಧಿಗಳಲ್ಲ ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕಿದೆ. ಕಾಂಗ್ರೆಸ್ ಅಮಾಯಕರನ್ನು ಬಂಧಿಸಿ ಕೇಸ್ ದಾಖಲಿಸುವ ಕೆಲಸ ಮಾಡುತ್ತಿದೆ. ಕಲ್ಲು ಹೊಡೆದವರನ್ನು ಅಮಾಯಕರೆಂದು ಹೇಳುತ್ತಿದೆ. ಈ ನಡವಳಿಕೆ ಬದಲಿಸಿಕೊಳ್ಳದಿದ್ದರೆ ರಸ್ತೆಯಲ್ಲಿ ಓಡಾಡಲು ಸಾಧ್ಯವಿಲ್ಲ. ಜನರೇ ಬಡಿಗೆ ಹಿಡಿದು ಬೀದಿಗಿಳಿಯುತ್ತಾರೆ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net