ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯ ವಾರಸುದಾರರು

10 GJD 1
Published on

ಗಜೇಂದ್ರಗಡ: ಸ್ವಾತಂತ್ರ್ಯ ನಿಜವಾದ ವಾರಸುದಾರರು ಕಾಂಗ್ರೆಸ್​ನ ನಾಯಕರು. ಸರಳವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ. ನೂರಾರು ನಾಯಕರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಜೈಲಿಗೆ ಹೋಗಿದ್ದಾರೆ. ಅಂತಹ ನಾಯಕರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪಾದಯಾತ್ರೆಯು ಬುಧವಾರ ಪಟ್ಟಣಕ್ಕೆ ಆಗಮಿಸಿದ ವೇಳೆ ಅವರು ಮಾತನಾಡಿದರು.
ಈ ದೇಶಕ್ಕೆ ತ್ರಿವರ್ಣ ಧ್ವಜ ಕೊಟ್ಟಿದ್ದು ಕಾಂಗ್ರೆಸ್. ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಕಾಂಗ್ರೆಸ್ ಸಾಧನೆಗಳನ್ನು ತಿಳಿಸಲು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು. ಪುರಸಭೆ ವಿಪಕ್ಷ ನಾಯಕ ಮುರ್ತಜಾ ಡಾಲಾಯತ, ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ಘೊರ್ಪಡೆ ಮಾತನಾಡಿದರು. ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಪ್ಪು ಮತ್ತಿಕಟ್ಟಿ, ನರೇಗಲ್ಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ರೇವಡಿ, ವೆಂಕಟೇಶ ಮುದಗಲ್ಲ, ಶ್ರೀಧರ ಬಿದರಳ್ಳಿ, ಸಿದ್ದು ಗೊಂಗಡಶೆಟ್ಟಿಮಠ, ಬಸವರಾಜ ನವಲಗುಂದ, ಸಂಜಯ ದೊಡ್ಡಮನಿ, ಅಸ್ಲಾಂ ಕೊಪ್ಪಳ, ಮೌನೇಶ ಹಾದಿಮನಿ, ಗದಿಗೆಪ್ಪ ಕಿರೇಸೂರ, ಮಲ್ಲಯ್ಯ ಮಹಾಪುರುಷಮಠ, ಬಾವಾಸಾಬ ಬೆಟಗೇರಿ, ಬಸವರಾಜ ಶೀಲವಂತರ, ನೀಲಮ್ಮ ಬಳೂಟಗಿ, ಸುಮಂಗಲಾ ಇಟಗಿ, ವಿಜಯಲಕ್ಷ್ಮೀ ವಸ್ತ್ರದ, ಶರಣಮ್ಮ ಮುರನಾಳ, ಅಂದಪ್ಪ ರಾಠೋಡ, ತುಳಸಿರಾಮ ಮಾಳೋತ್ತರ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net