ಕಾಂಗ್ರೆಸ್ ಮುಖಂಡರಲ್ಲಿ ಸಂತಸ

23 LNG 02
ಲಿಂಗಸುಗೂರು ಗಡಿಯಾರ ವೃತ್ತದಲ್ಲಿ ವಿಧಾನಸಭಾ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಪ್ರಯುಕ್ತ ಕಾಂಗ್ರೆಸ್ ಮುಖಂಡರು ಶನಿವಾರ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
Published on

ಲಿಂಗಸುಗೂರು: ರಾಜ್ಯದ ಚನ್ನಪಟ್ಟಣ, ಹಾವೇರಿ ಜಿಲ್ಲೆಯ ಶಿಗ್ಗಾವಿ ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಪ್ರಯುಕ್ತ ಪಟ್ಟಣದ ಗಡಿಯಾರ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಶನಿವಾರ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಪುರಸಭೆ ಅಧ್ಯಕ್ಷ ಬಾಬುರಡ್ಡಿ ಮುನ್ನೂರು, ಪ್ರಮುಖರಾದ ಖಾದರ ಪಾಷಾ, ಎಂ.ಡಿ.ರಫೀ, ಶರಣಬಸವ ಮೇಟಿ, ಅಮರೇಶ ಹಿರೇ ಹೆಸರೂರು, ಪರಸಪ್ಪ ಹುನಕುಂಟಿ, ಸಂಜೀವಪ್ಪ ಛಲವಾದಿ, ಮಂಜುನಾಥ, ಅಲ್ಲಾವುದ್ದಿನ್ ಪಟೇಲ್, ಶಿವರಾಜ ದೇಗುಲಮಡಿ, ರುದ್ರಪ್ಪ ಬ್ಯಾಗಿ, ಮೌನೇಶ ಗೋಸ್ಲೆ, ಬಾಲನಗೌಡ ಪಾಟೀಲ್, ರವಿಚೌಧರಿ, ಹಾಜಿಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net