ಕಾಂಗ್ರೆಸ್ ಸಭೆಯಲ್ಲಿ ಗಲಾಟೆ: ಇಬ್ಬರ ಬಂಧನ

IMG_20230105_074308.jpg
Published on

ಹೊಸಪೇಟೆ: ಬಳ್ಳಾರಿ -ವಿಜಯನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯಾರ್ಥಿಗಳ ಆಯ್ಕೆಗೆ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾನಭಂಗ ಹಾಗೂ ಜಾತಿನಿಂದನೆ ಮಾಡಿದ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದೆ.
ಹೊಸಪೇಟೆ ತಾಲೂಕು ಮಹಿಳಾ ಬ್ಲಾಕ್ ಅಧ್ಯಕ್ಷ ಯೋಗಲಕ್ಷೀ, ಪಕ್ಷದ ಕಾರ್ಯಕರ್ತ ಸಂದೀಪ ಬಂಧಿತರು.
ನಗರದ ಮಲ್ಲಿಗೆ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಪಕ್ಷದ ಪ್ರಮುಖರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಶಿಲ್ಪಾ ಅವರೊಂದಿಗೆ ಜಗಳ ತೆಗೆದಿದ್ದ ಯೋಗ ಲಕ್ಷೀ ಮತ್ತು ಸಂದೀಪ್ ಅವಾಚ್ಯ ಪದಗಳನ್ನು ಬಳಸಿ, ಜಾತಿ ನಿಂದನೆ, ಮಾನಭಂಗ ಮಾಡಿದ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಶ್ರೀಹರಿಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net