

ಮಂಡ್ಯ: ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುವುದಾಗಿ ಭರವಸೆ ನೀಡಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಡೆದುಕೊಳ್ಳಬೇಕು. ಆದರೀಗ ತಮಿಳುನಾಡು ಸರ್ಕಾರವನ್ನು ಒಪ್ಪಿಸಿ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ 5 ನಿಮಿಷದಲ್ಲಿ ಒಪ್ಪಿಗೆ ಕೊಡಿಸುತೇನೆಂದು ಹೇಳುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಶಿವನಂಜು ಆರೋಪಿಸಿದರು.
ಯೋಜನೆ ಅನುಷ್ಠಾನವಾದಲ್ಲಿ 67.5 ಟಿ.ಎಂ.ಸಿ ನೀರು ಸಂಗ್ರಹ ಮಾಡಬಹುದಾಗಿದೆ. ಪ್ರತೀ ಬಾರಿಯೂ ತಮಿಳುನಾಡು ಮತ್ತು ಕರ್ನಾಟಕದ ನಡುವೆ ನಡೆಯುವ ಕಾವೇರಿ ನೀರಿನ ಹಂಚಿಕೆಯಲ್ಲಿ ಇದು ತುಂಬಾ ಅನುಕೂಲವಾಗಿದ್ದು, ಇದರಿಂದ ಕಾವೇರಿ ಕೊಳ್ಳದ ರೈತರಿಗೂ ಉಪಯುಕ್ತವಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಗರಸಭಾ ಸದಸ್ಯ ಶ್ರೆಧರ್, ಮುಖಂಡರಾದ ಕೀಲಾರ ಶಿವಲಿಂಗಣ್ಣ, ಕೆ.ಎಲ್.ನಾಗೇಂದ್ರ, ವೆಂಕಟೇಶ್, ಕೀಲಾರ ಚನ್ನಪ್ಪ ದ್ದರು.