

ಹುಬ್ಬಳ್ಳಿ: ವಿವಾದಿತ ಜಾಗದಲ್ಲಿಯೇ ಕಾಂಗ್ರೆಸ್‌ನವರು ಪೂಜೆ ಸಲ್ಲಿಸಿದ ಘಟನೆ ನಗರದ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಶನಿವಾರ ನಡೆದಿದೆ.
1956ರಿಂದ ಜಾಗ ತನ್ನದೆಂದು ಕಾಂಗ್ರೆಸ್ ಹೇಳುತ್ತಿದೆ. ಜೆಡಿಯು ಹಾಗೂ ಜೆಡಿಎಸ್ ಕೂಡ ತಮ್ಮದೆನ್ನುತ್ತಿವೆ. ಆದರೆ, ನಗರ ಭೂಮಾಪನ ಇಲಾಖೆ ಅಧಿಕಾರಿಗಳ ಆದೇಶದ ಮೇರೆಗೆ ಕಾಂಗ್ರೆಸ್‌ನವರು ಹೊಸ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಪೂಜೆ ನೆರವೇರಿಸಿದ್ದಾರೆ. ಅನಿಲಕುಮಾರ ಪಾಟೀಲ, ಅಲ್ತಾಫ್‌ಹುಸೇನ್ ಹಳ್ಳೂರ, ಎ.ಎಂ. ಹಿಂಡಸಗೇರಿ ಇತರರು ಹಾಜರಿದ್ದರು.
ತನ್ನದೇ ಜಾಗವಿದು. ಕಾಂಗ್ರೆಸ್‌ನವರು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ಕಾಂಗ್ರೆಸ್ ನಾಯಕರ ಮೇಲೆ ಕ್ರಮ ಜರುಗಿಸಬೇಕೆಂದು ಜೆಡಿಎಸ್ ಹಾಗೂ ಜೆಡಿಯು ಶಹರ ಠಾಣೆಗೆ ದೂರ ನೀಡಿವೆ. ಸೋಮವಾರ ಜೆಡಿಯು ಹೈಕೋರ್ಟ್ ಮೆಟ್ಟಿಲು ಹತ್ತಲಿದೆ.