ಕೋಟೆನಾಡಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವುದು ಖಚಿತ

Congress is sure to fly the flag in Kotenad
ರಬಕವಿಯ ಕುಂಬಾರ ಓಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಪರ ಸಹೋದರಿ ಸಂಪ್ರದಾ ಪಾಟೀಲ ಭರ್ಜರಿ ಪ್ರಚಾರ ನಡೆಸಿದರು. ಗೋದಾವರಿ ಕುಂಬಾರ, ಕವಿತಾ ಕೊಣ್ಣೂರ ಇದ್ದರು.
Published on


ರಬಕವಿ-ಬನಹಟ್ಟಿ: ಕೋಟೆ ಮತದಾರರು ಪ್ರಜ್ಞಾವಂತರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರನ್ನು ಗೆಲ್ಲಿಸುತ್ತಾರೆ ಎಂದು ಸಂಯುಕ್ತ ಸಹೋದರಿ ಸಂಪ್ರದಾ ಪಾಟೀಲ ಹೇಳಿದರು.

ತಾಲೂಕಿನ ರಬಕವಿಯ ಕುಂಬಾರ ಓಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಪರ ಪ್ರಚಾರ ಕೈಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ 5 ಗ್ಯಾರಂಟಿಗಳನ್ನು ನೀಡಿ ನುಡಿದಂತೆ ನಡೆದ ಸರ್ಕಾರವಾಗಿದೆ. ಆ ಗ್ಯಾರಂಟಿ ಆಧಾರದ ಮೇಲೆ ಮತದಾರರು ನಮಗೆ ಮತ ಕೊಟ್ಟು ಈ ಬಾರಿ ನಮಗೆ ಅವಕಾಶ ಮಾಡಿಕೊಡುತ್ತಾರೆಂಬ ಆತ್ಮವಿಶ್ವಾಸ ನಮಗಿದೆ. 20 ವರ್ಷ ಬಾಗಲಕೋಟೆ ಗದ್ದುಗೆ ಏರಿದ ಪಿ.ಸಿ.ಗದ್ದಿಗೌಡರ ಅವರಿಂದ ಅಭಿವೃದ್ಧಿ ಆಗಿಲ್ಲ. ಹಾಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರನ್ನು ಗೆಲ್ಲಿಸಲಿದ್ದಾರೆ ಎಂದರು.

ಎಲ್ಲ ಸಮುದಾಯದ ಚೌಕಟ್ಟಿನಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿದೆ. ನಮ್ಮ ಸರ್ಕಾರದ ಮೇಲೆ ಎಲ್ಲ ಸಮುದಾಯದವರು ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸಕ್ಕೆ ಕಾಂಗ್ರೆಸ್ ಪಕ್ಷ ಯಾವತ್ತೂ ಮೋಸ ಮಾಡಲ್ಲ. ಹಾಗಾಗಿ ಈ ಬಾರಿ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಗೆಲುವು ಖಚಿತ ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ಗೋದಾವರಿ ಕುಂಬಾರ, ಕವಿತಾ ಕೊಣ್ಣೂರ, ರೇಣುಕಾ ಮಡ್ಡಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net