

ರಾಯಚೂರು ಡಾ.ಬಿ.ಆರ್.ಅಂಬೇಡ್ಕರ ಸೋಲಿಗೆ ಕಾಂಗ್ರೆಸ್ ನೇರ ಕಾರಣವಾಗಿದ್ದು, ಸಾರ್ವಕರ ಹೆಸರನನ್ನು ಅನಗತ್ಯವಾಗಿ ಎಳೆದು ತಂದು ಸಚಿವ ಪ್ರಿಯಾಂಕ ಖರ್ಗೆ ಹಾಗೂ ಛಲವಾದಿ ನಾರಾಯಣಸ್ವಾಮಿ ಸೇರಿ ರಾಜಕಾರಣ ಮಾಡುತ್ತಿದ್ದಾರೆಂದು ಡಾ.ಬಿ.ಆರ್.ಅಂಬೇಡ್ಕರ ಪೀಪುಲ್ಸ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ದೇವಮಿತ್ರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಮಾತನಾಡಿ, 1952 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬೊಂಬಾಯಿ ಉತ್ತರ ಕ್ಷೇತ್ರದಿಂದ ಮೀಸಲು ಅಭ್ಯರ್ಥಿಯಾಗಿ ಡಾ.ಬಿ.ಆರ್. ಅಂಬೇಡ್ಕರ, ಕಾಂಗ್ರೆಸ್ ಪಕ್ಷದಿಂದ ಕಾರಜೋಳ್ಕರ ನಾರಾಯಣ ಸಾಡೋಭಾ ಸ್ಪರ್ಧಿಸಿದ್ದು, 14,561 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಕಾಜರೋಳ್ಕರ್ ನಾರಾಯಣ ಸಾಡೋಬಾ ಗೆಲುವು ಸಾಧಿಸಿದ್ದರು.
ಆದರೆ ಪ್ರಿಯಾಂಕ ಖರ್ಗೆಯವರು ಡಾ.ಬಿ.ಆರ್.ಅಂಬೇಡ್ಕರ್ ಇವರನ್ನು ಸೋಲಿಸಿರುವದನ್ನು ಹೇಳದೇ ಸಾರ್ವಕರ್ ಅಂಬೇಡ್ಕರರನ್ನು ಸೋಲಿಸಿದ್ದಾರೆ ಎಂದು ಹೇಳಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಬರೆದ ಪತ್ರದಲ್ಲಿ ಸಾರ್ವಕರ್ ಇವರು ಸಹ ಸೋಲಿಗೆ ಕಾರಣವಾಗಿರಬಹುದು ಎಂದೇಷ್ಟ ಉಲ್ಲೇಖಿಸಿದ್ದಾರೆ. ಅವರೇ ಕಾರಣ ಎಂದು ಸುಳ್ಳು ಹೇಳುತ್ತಿದ್ದಾರೆ. ಮೂರುಜನ ವ್ಯಕ್ತಿಗಳ ಕುರಿತು ನಡೆದ ಚರ್ಚೆಯ ಮಾತುಗಳಷ್ಟೇ. ಆದರೆ ಅಸ್ಪಶ್ಯತೆ, ಪರಿಶಿಷ್ಟ ಜಾತಿಗಳಿಗೆ ಸಮಾಜಿಕ ನ್ಯಾಯ ಕುರಿತು ಮಾತನಾಡದ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ ಖರ್ಗೆಯವರು ಅಧಿಕಾರ, ಹಣ ಮಾಡಲು ಅಂಬೇಡ್ಕರ ಬೇಕು.
ಡಾ.ಬಿ.ಆರ್.ಅಂಬೇಡ್ಕರ ವಿರೋಧಿಸಿ ಕಾಂಗ್ರೆಸ್ ಪಕ್ಷದಲ್ಲಿ ಜನರನ್ನು ವಂಚಿಸಿದ್ದಾರೆ, ಇವರು ಮಾಡಿರು ಆಸ್ತಿಯನ್ನು ಸರ್ಕಾರಕ್ಕೆ ಹಿಂದಕ್ಕೆ ನೀಡಬೇಕು. ಇಲ್ಲದೇ ಹೋದಲ್ಲಿ ಪಕ್ಷದಿಂದ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸುವದಾಗಿ ಹೇಳಿದರು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮಾರುತಿರಾವ್ ಜಂಬಗಾ, ಮಹಾಂತೇಶ ಕುಮಾರ ಮಿತ್ರಾ, ಮದನಕುಮಾರ ಮಿತ್ರ, ಸ್ವಾಮಿದಾಸ, ಜಗ್ಲಿ ಕುರ್ಡಿ ಇದ್ದರು.