ಹಿಂದುಸ್ತಾನವನ್ನು ಪಾಕಿಸ್ತಾನ ಮಾಡಲು ಹೊರಟ ಕಾಂಗ್ರೆಸ್

ex dcm eshwarappa
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ಹಿಂದುಸ್ತಾನವನ್ನು ಕಾಂಗ್ರೆಸ್ ಪಾಕಿಸ್ತಾನ ಮಾಡಲು ಹೊರಟಿದೆ. ಇದು ಮುಂದುವರಿದರೆ ಸಾಧು ಸಂತರು, ಧರ್ಮಾಭಿಮಾನಿಗಳ ನೇತೃತ್ವದಲ್ಲಿ ರಾಜ್ಯದಲ್ಲಿ ಧಂಗೆ ಏಳುವುದು ನಿಶ್ಚಿತ. ಹಿಂದಲ್ಲ, ನಾಳೆ ಧಂಗೆ ಎದ್ದರೆ ಅದಕ್ಕೆ ಕಾಂಗ್ರೆಸ್ಸೇ ಕಾರಣ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ದೂರಿದರು.

ಕಾಂಗ್ರೆಸ್ ಮುಸ್ಲಿಮರ ತುಷ್ಟೀಕರಣದಲ್ಲಿ ತೊಡಗಿಕೊಂಡಿದ್ದು ಇಡೀ ರಾಜ್ಯದಲ್ಲಿ ರೈತರು, ದೇವಸ್ಥಾನ, ಮಠಮಂದಿರಗಳು, ಪೌರತತ್ವ ಇಲಾಖೆ, ಶಿಕ್ಷಣ ಇಲಾಖೆ ಜಾಗ ಮಾತ್ರವಲ್ಲದೆ ಸರ್.ಎಂ.ವಿ.ವಿಶ್ವೇಶ್ವರಯ್ಯ ಅವರು ಜನಿಸಿದ ಭೂಮಿಯನ್ನೂ ವಕ್ಫ್ ಮಂಡಳಿ ಆಸ್ತಿಯನ್ನಾಗಿ ಮಾಡಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ಯಾವೊಬ್ಬ ಕಾಂಗ್ರೆಸ್ಸಿಗರೂ ಚಕಾರ ಎತ್ತುತ್ತಿಲ್ಲ. ಹಾಗಾಗಿ ಹಿಂದುಗಳು ತಾಳ್ಮೆ ಕಳೆದುಕೊಂಡರೆ ರಸ್ತೆಯಲ್ಲಿ ಮುಸ್ಲಿಮರ ಮೇಲೆ ದಾಳಿಯಾಗಬಹುದು. ಹತ್ಯೆಗಳೂ ನಡೆಯಬಹುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಮತಕ್ಕಾಗಿ ದೇಶವನ್ನೇ ಮತಾಂತರ ಮಾಡುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಮುಸ್ಲಿಮರು ಮಾಡುತ್ತಿರುವ ಅಚಾತುರ್ಯಗಳನ್ನು ನೋಡಿಕೊಂಡು ಕಾಂಗ್ರೆಸ್ ಸುಮ್ಮನಿರುವುದು ಆಚ್ಚರಿ ಮೂಡಿಸಿದೆ. ಪ್ರತಿಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂದು ಹೇಳಿ ಇಡೀ ದೇಶವನ್ನೇ ಇಸ್ಲಾಮೀಕರಣ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಕಿಡಿಕಾರಿದರು.

ವಕ್ಫ್ ಮಂಡಳಿಯಿಂದ ನೋಟಿಸ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿ ಸುಮ್ಮನಾಗಿದ್ದಾರೆ. ಇದುವರೆಗೂ ನೋಟಿಸ್‌ಗಳನ್ನು ಹಿಂಪಡೆಯುವ ಕೆಲಸ ಆಗುತ್ತಿಲ್ಲ. ಹಿಂದುಗಳ ಭೂಮಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ನೀಡುವ ಮೂಲಕ ಇಸ್ಲಾಂ ರಾಷ್ಟ್ರ ಮಾಡುವನ್ನಾಗಿ ಮಾಡುವ ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಿದರು.

ಡಾ. ಬಿ.ಆರ್.ಅಂಬೇಡ್ಕರ್ ಅವರು ಇಸ್ಲಾಂಗೆ ಮತಾಂತರ ಹೊಂದರಲು ಸಿದ್ಧತೆ ಮಾಡಿಕೊಂಡಿದ್ದರೆಂದು ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹೇಳಿಕೆಯನ್ನೂ ಕಾಂಗ್ರೆಸ್ ನಾಯಕರು ಖಂಡಿಸಿಲ್ಲ. ಇದು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ. ಜತೆಗೆ ಮುಸ್ಲಿಮರ ಮೀಸಲಾತಿ ವಿಚಾರದಲ್ಲೂ ತಾರತಮ್ಯ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೇವಲ ಮುಸ್ಲಿಮರ ಓಟಿಗಾಗಿ ದೇಶವನ್ನೇ ಮತಾಂತರ ಮಾಡಲು ಕಾಂಗ್ರೆಸ್ ಹೊರಟಿದ್ದು ಮಾತ್ರವಲ್ಲದೆ, ಅದನ್ನೇ ಸಾಬೀತು ಮಾಡಲು ಮುಂದಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net