

ಲೋಕಾಪುರ : ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಿಗೆ ಮನ್ನಣೆ ದೊರೆಯುತ್ತದೆ ಎಂದು ವಿಜಯಪುರ-ಬಾಗಲಕೋಟ ಕೆಎಂಎಫ್ ರ್ದೇಶಕ ಲಕ್ಷ್ಮಣ ಮಾಲಗಿ ಹೇಳಿದರು.
ಪಟ್ಟಣದಲ್ಲಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಗೋವಿಂದ ಕೌಲಗಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಎಲ್ಲರಿಗೂ ಅವಕಾಶ ನೀಡಲಿದೆ. ಹೀಗಾಗಿ ಕಾರ್ಯಕರ್ತರು ತಾಳ್ಮೆ ವಹಿಸುವುದು ಅವಶ್ಯ. ಹುದ್ದೆ ದೊರೆಯಲಿಲ್ಲ ಎಂಬ ಕಾರಣದಿಂದ ಪಕ್ಷದ ಚಟುವಟಿಕೆಗಳಿಂದ ದೂರು ಉಳಿಯುವುದು ಸರಿಯಲ್ಲ ಎಂದರು.
ಗೋವಿಂದ ಕೌಲಗಿ ಮಾತನಾಡಿ, ಅಧಿಕಾರ ಶಾಶ್ವತವಲ್ಲ, ಸೇವೆ ಶಾಶ್ವತವಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ. ಪ್ರಾಮಾಣಿಕರನ್ನು ಪಕ್ಷ ಎಂದಿಗೂ ಕೈ ಬಿಡುವುದಿಲ್ಲ ಎಂದರು.
ರವಿ ರೊಡ್ಡಪ್ಪನವರ, ಮಹೇಶ ಹುಗ್ಗಿ, ಹುಲ್ಲಪ್ಪ ತಳವಾರ, ಶಂಕರ ಪೂಜಾರ, ಮಹೇಶ ಪೂಜಾರ, ಸಿಂಧೂರ ಆನೆಗುದ್ದಿ, ರಮೇಶ ಗಸ್ತಿ, ವಿಠ್ಠಲ ಆನೆಗುದ್ದಿ, ರಂಗನಾಥ ಚಿಪ್ಪಲಕಟ್ಟಿ ಮತ್ತಿತರರಿದ್ದರು.