ಯುವ ಜನಾಂಗಕ್ಕೆ ಬಿಜೆಪಿ ಹಿಡಿಸಿದ ಗ್ರಹಣ ಬಿಡಿಸಲಿದೆ 'ಯುವ ಕ್ರಾಂತಿ ಸಮಾವೇಶ' : ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ

IMG-20230319-WA0035.jpg
Published on

ಬೆಳಗಾವಿ : ಕಳೆದ ಹಲವು ವರ್ಷಗಳಿಂದ ಯಾವುದೇ ಉದ್ಯೋಗ ಸೃಷ್ಟಿ ಇಲ್ಲದೇ ಕರ್ನಾಟಕದ ಯುವಜನಾಂಗದ ಭವಿಷ್ಯಕ್ಕೆ ಬಿಜೆಪಿ ಸರ್ಕಾರ ಗ್ರಹಣ ಹಿಡಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಯುವ ಕ್ರಾಂತಿ ಸಮಾವೇಶದಿಂದ ಗ್ರಹಣಕ್ಕೆ ಮುಕ್ತಿ ಸಿಗಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಹೇಳಿದರು.


ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಮಾ.20ರಂದು ಹಮ್ಮಿಕೊಂಡಿರುವ ಯುವ ಕ್ರಾಂತಿ ಸಮಾವೇಶ’ದ ಸಿದ್ದತೆ ಚಟುವಟಿಕೆಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರೊಂದಿಗೆ ಪರಿಶೀಲನೆ ನಡೆಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶದಿಂದ ಕರ್ನಾಟಕ ಸರ್ಕಾರದ ಭವಿಷ್ಯದಲ್ಲಿ ನೂತನ ಸೂರ್ಯ ಉದಯಿಸಲಿದ್ದಾನೆ ಎಂದರು.
ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ರಾಜ್ಯದ ಯುವಕರ ಜೀವನ ಉಜ್ವಲಗೊಳಿಸುವ ಗ್ಯಾರಂಟಿ ಕಾರ್ಡ್ ಅನಾವರಣಗೊಳಿಸಲಿದ್ದಾರೆ. ಮುಂದೆ ಈ ಕಾರ್ಯಕ್ರಮವನ್ನ ಮೋದಿ ಸರ್ಕಾರ ಸಹ ಜಾರಿಗೊಳಿಸಬೇಕಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪರ ಒಲವಿರುವುದನ್ನು ಮನಗಂಡಿರುವ ಪ್ರದಾನಿ ಮೋದಿ ಸೇರಿದಂತೆ ಇಡೀ ಬಿಜೆಪಿ ಭಯಪಟ್ಟಿದೆ. ಹಾಗಾಗಿಯೇ ರಾಹುಲ್ ಗಾಂಧಿ ಅವರು ಸೋಮವಾರ ಕರ್ನಾಟಕಕ್ಕೆ ಆಗಮಿಸಿ ಯವಕರಿಗಾಗಿ ‘ಕಾಂಗ್ರೆಸ್ ಗ್ಯಾರಂಟಿ’ ಘೋಷಣೆ ಮಾಡಲಿದ್ದಾರೆ ಎಂದು ಭಯಪಟ್ಟು ದೆಹಲಿಯಲ್ಲಿ ಈಗಲೇ ಅವರ ಮನೆಗೆ ಪೊಲೀಸರನ್ನು ಕಳಿಸಿದ್ದು, ಅದಾನಿ ಹಗರಣದ ಕುರಿತಾದ ಚರ್ಚೆಯನ್ನು ತಡೆಯಲು ಈ ಕ್ರಮ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದ ಅವರು, ಯಾವುದೇ ಕಾರಣಕ್ಕೂ ಯುವ ಕ್ರಾಂತಿ ಸಮಾವೇಶ ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದರು.


ಯುವ ಕ್ರಾಂತಿ ಸಮಾವೇಶದ ಮುಖ್ಯಾಂಶಗಳು
-ಸೋಮವಾರ ಬೆಳಗ್ಗೆ 11ಕ್ಕೆ ರಾಷ್ಟ್ರ ಹಾಗೂ ರಾಜ್ಯಮಟ್ಟದ ಕಾಂಗ್ರೆಸ್ ನಾಯಕರ ಆಗಮನ
-ಬೆಳಗ್ಗೆ 11.30ಕ್ಕೆ ರಾಹುಲ್ ಗಾಂಧಿ ಆಗಮನ, ಹಿಂಡಲಗಾ ರಸ್ತೆಯಲ್ಲಿರುವ ಸಿಪಿಎಡ್ ಮೈದಾನದಲ್ಲಿ ಸಮಾವೇಶ
-ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಮೊದಲ ಸಮಾವೇಶ
-80 ಸಾವಿರಕ್ಕೂ ಅಧಿಕ ಆಸನ ವ್ಯವಸ್ಥೆ ಮಾಡಲಾಗಿದೆ
-ಲಕ್ಷಾಂತರ ಜನ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸುವ ನಿರೀಕ್ಷೆಯಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net