ಭಯೋತ್ಪಾದಕರ ತಾಣ ಮಾಡಲು ಹೊರಟ ಕಾಂಗ್ರೆಸ್

MLA S.N. Chanabasappa
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿದರು. ಸಂಸದ ಬಿ.ವೈ.ರಾಘವೇಂದ್ರ, ಎಂಎಲ್ಸಿ ಡಿ.ಎಸ್.ಅರುಣ್ ಸುದ್ದಿಗೋಷ್ಠಿಯಲ್ಲಿದ್ದರು.
Published on

ಶಿವಮೊಗ್ಗ: ಒಂದು ಕಾಲದಲ್ಲಿ ಶಿವಮೊಗ್ಗ ನಕ್ಸಲರ ತಾಣವಾಗಿತ್ತು. ನಕ್ಸಲರ ಹಾವಳಿ ಸಂಪೂರ್ಣ ಕಡಿಮೆ ಆಗಿದೆ. ಆದರೆ ಈಗ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನೇ ಭಯೋತ್ಪಾದಕರ ತಾಣವನ್ನಾಗಿ ಮಾಡಲು ಹೊರಟಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆರೋಪಿಸಿದರು.

ಕಾಂಗ್ರೆಸ್ ಸರ್ಕಾರದ ಬಂದ ಮೇಲೆ ಹಿಂದುಗಳಿಗೆ ಉಳಿಗಾಲವಿಲ್ಲ ಎಂಬಂತಾಗಿದೆ. ಅದೇ ರೀತಿ ಆಡಳಿತ ನಡೆಸಲಾಗುತ್ತಿದೆ. ಹಿಂದುಗಳ ಹತ್ಯೆ ಮಾಡಲೇಬೇಕು ಎಂದು ಹಠಕ್ಕೆ ಬಿದ್ದಿದ್ದು ಜಾತ್ಯತೀತ ಎಂದು ಹೇಳಿಕೊಂಡು ಹಿಂದುತ್ವವಾದಿಗಳ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಬಾಂಬ್ ತಯಾರಿ ಮಾಡುವ ಹಂತಕರಿಗೂ ಪುಷ್ಟಿ ನೀಡುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕೆಫೆಯಲ್ಲೂ ಬಾಂಬ್ ಇಟ್ಟರು. ಹಿಂದುಗಳು ನೆಮ್ಮದಿಯಾಗಿ ಟೀ ಕುಡಿಯುವುದಕ್ಕೆ ಹೋಗಲೂ ಸಾಧ್ಯವಾಗದ ಸ್ಥಿತಿ ಇದೆ. ಕರ್ನಾಟಕವನ್ನೇ ಪಾಕಿಸ್ತಾನ ಮಾಡಲು ಹೊರಟಿದ್ದು, ಸಂಸದ ಡಿ.ಕೆ.ಸುರೇಶ್ ಮೆರವಣಿಗೆಯಲ್ಲಿ ಪಾಕ್ ಪರ ಘೋಷಣೆ ಕೂಗುತ್ತಾರೆ ಎಂದರೆ ರಾಜ್ಯದ ಸ್ಥಿತಿ ಎಲ್ಲಿಗೆ ತಲುಪಿದೆ ಎಂಬುದನ್ನು ಗಂಭೀರವಾಗಿ ಆಲೋಚಿಸಬೇಕಿದೆ. ಇದನ್ನೆಲ್ಲ ನೋಡಿದರೆ ಕಾಂಗ್ರೆಸ್ ಸರ್ಕಾರ ಬದುಕಿದೆಯಾ ಎಂದು ಅನುಮಾನ ಕಾಡುತ್ತಿದೆ. ರಾಜ್ಯದಲ್ಲಿ ಹಿಂದುಗಳ ಸೆದೆಬಡಿಯುವುದು ಕಾಂಗ್ರೆಸ್ ಉದ್ದೇಶ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net