

ಬೆಂಗಳೂರು: ವಿಡಿಯೋಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕಟ್ ಮಾಡಿ, ಎಡಿಟ್ ಮಾಡಿ ವಿರೋಧ ಪಕ್ಷಗಳ ತೇಜೋವಧೆ ಮಾಡವುದು, ಸುಳ್ಳು ಸುದ್ದಿ ಹರಡುವುದು ಕಾಂಗ್ರೆಸ್‌ಗೆ ಚೆನ್ನಾಗಿ ಕರಗತವಾಗಿದೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಬಸ್ ಪ್ರಯಾಣ ದರ ವಿರೋಧಿಸಿ ಪ್ರತಿಭಟನೆ ವೇಳೆ ಪೊಲೀಸರ ವಿರುದ್ಧ ಕಿಡಿಕಾರಿದ್ದ ತಮ್ಮ ವಿಡಿಯೋವನ್ನು ಕಾಂಗ್ರೆಸ್ ತಿರುಚಿದೆ ಎಂಬುದು ಅಶೋಕ್ ಅವರ ಆರೋಪ.
ಕಾಮಾಲೆ ಕಣ್ಣಿನವನಿಗೆ ಜಗತ್ತೆಲ್ಲ ಹಳದಿ ಎಂಬಂತೆ ಟೂಲ್ ಕಿಟ್‌ನಲ್ಲಿ ನಿಸ್ಸೀಮರಾಗಿರುವ ಕಾಂಗ್ರೆಸ್ ಪಕ್ಷದವರಿಗೆ ಎಲ್ಲದರಲ್ಲೂ ಟೂಲ್ ಕಿಟ್ ಕಾಣುತ್ತದೆ. ನಾಚಿಕೆಯಾಗಬೇಕು ಕಾಂಗ್ರೆಸ್ ನೀಚತನಕ್ಕೆ, ಕೀಳು ಮನಸ್ಥಿತಿಗೆ ಎಂದು ಕುಟುಕಿದ್ದಾರೆ.
ಇದಕ್ವಿಕೂ ಮುನ್ನ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದ ಕಾಂಗ್ರೆಸ್, ವಿಪಕ್ಷ ನಾಯಕ ಆರ್.ಅಶೋಕ್ ಅವರು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿ ನಡು ರಸ್ತೆಯಲ್ಲಿ ಬೆದರಿಕೆ ಹಾಕಿ ಗೂಂಡಾಗಿರಿ ಪ್ರದರ್ಶಿಸಿರುವುದು ಬಿಜೆಪಿಯ ಮನಸ್ಥಿತಿಯನ್ನು ಎತ್ತಿ ತೋರುತ್ತಿದೆ. ವಿಪಕ್ಷ ನಾಯಕರಾದ ಕೂಡಲೇ ನೀವೇನು ಸರ್ವಾಧಿಕಾರಿಯೇ? ಸಾಂವಿಧಾನಿಕ ಕಾನೂನು ಉಲ್ಲಂಘನೆ ಮಾಡಿ ಏನು ಬೇಕಾದರೂ ದುರ್ವರ್ತನೆ ತೋರಬಹುದೇ? ಎಂದು ಪ್ರಶ್ನಿಸಿತ್ತು.