

ಹೊಸಪೇಟೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಮದರೆ ಜನರಿಗೆ ನೀಡಿರುವ ಭರವಸೆಗಳ ಗ್ಯಾರಂಟಿ ಕಾರ್ಡ್ ವಿತರಣೆಗೆ ಚಾಲನೆ ಮತ್ತು ಜಿಲ್ಲೆಯಲ್ಲಿ ಪಕ್ಷದ ಕಾರ್ಯಚಟುವಟಿಕೆಗಳ ಪರಾಮರ್ಶೆ ಕಾರ್ಯಕ್ರಮವನ್ನು ಮಾರ್ಚ್ ೪ ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಆಜಾದ್ ನಗರದ ಉಮರ್ ಫಂಕ್ಷನ್ ಹಾಲ್‌ನಲ್ಲಿ ಅಂದು ಸಂಜೆ ೬.೩೦ಕ್ಕೆ ಕಾರ್ಯಕ್ರಮ ಆಯೋಜಿಸಿದೆ. ಕೆಪಿಸಿಸಿ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಚಾಲನೆ ನೀಡಲಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಎಐಸಿಸಿ ಪ್ರಮುಖರಾದ ಶ್ರೀಧರ ಬಾಬು ಮತ್ತಿತರೆ ಪ್ರಮುಖರು ಪಾಲ್ಗೊಳ್ಳುವರು. ಗ್ಯಾರಂಟಿ ಕಾರ್ಡ್ ವಿತರಣೆಗೆ ಈಗಾಗಲೇ ಕೆಪಿಸಿಸಿಯಿಂದ ಚಾಲನೆ ನೀಡಿದ್ದು, ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಗ್ಯಾರೆಂಟಿ ಕಾರ್ಡ್ ವಿತರಣೆ ಮತ್ತು ಪಕ್ಷದ ಕಾರ್ಯಚಟುವಟಿಕೆಗಳ ಕುರಿತು ಪರಮಾರ್ಶೆ ನಡೆಸುವರು ಎಂದರು.
ಕಾAಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ತಲಾ ೨೦೦ ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಗೃಹ ಜ್ಯೋತಿ, ಪ್ರತಿ ಕುಟುಂಬದ ಮಹಿಳೆಗೆ ಮಾಸಿಕ ೨ ಸಾವಿರ ರೂ. ಸಹಾಯಧನ ಒದಗಿಸುವ ಗೃಹ ಲಕ್ಷಿö್ಮÃ ಯೋಜನೆಗಳನ್ನು ಜಾರಿಗೊಳಿಸುವ ಆಶ್ವಾಸನೆ ನೀಡಿದೆ. ೨ ಸಾವಿರ ರೂ.ಗಳಲ್ಲಿ ಸಿಲಿಂಡರ್ ಖರೀದಿ ಮತ್ತು ಜಿಎಸ್‌ಟಿಗೆ ತಲಾ ೫೦೦ ರೂ. ಮತ್ತು ಬೆಲೆ ಏರಿಕೆಗೆ ಪರಿಹಾರವಾಗಿ ೧ ಸಾವಿರ ರೂ. ಬಳಕೆ ಮಾಡಿಕೊಳ್ಳಬಹುದು. ಅಲ್ಲದೇ, ಪ್ರತಿ ಕುಟುಂಬಕ್ಕೆ ೧೦ ಕೆ.ಜಿ. ಅನ್ನ ಭಾಗ್ಯ ಅಕ್ಕಿ ನೀಡಲಿದ್ದು, ಮನೆ ನಿರ್ವಹಣೆಗೆ ಕಾಂಗ್ರೆಸ್‌ವೊAದೇ ಪರಿಹಾರ ಎಂದರು.
ಇಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದ ವಕೀಲರು, ಹೂವಿನಹಡಗಲಿ ಬ್ಲಾಕ್ ಅಧ್ಯಕ್ಷ ಎಂ.ಪರಮೇಶ್ವರಪ್ಪ ವಕೀಲರು, ಬಳ್ಳಾರಿ ಗ್ರಾಮೀಣ ಜಿಲ್ಲಾ ಉಪಾಧ್ಯಕ್ಷ ವಾರದ ಗೌಸ್ ಮೋದ್ದಿನ್ ಅವರು ಮೂರು ವರ್ಷಗಳಿಂದ ರಾಜೀನಾಮೆ ನೀಡಿದ್ದಾರೆ. ಆದರೆ, ಜಿ.ಪಂ., ತಾ.ಪಂ. ಚುನಾವಣೆ ನಿಮಿತ್ತ ರಾಜೀನಾಮೆ ತಡೆಯಿಡಿಯಲಾಗಿದೆ. ಸದ್ಯದ ವರೆಗೂ ಅವರ ಮನವೊಲಿಸಲಾಗುತ್ತಿದೆ. ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲವೆಂದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಎಲ್ಲೆ ಮೀರಿದರೆ ಶಿಸ್ತು ಕ್ರಮ: ಹೂವಿನಹಡಗಲಿ ಮತ್ತು ಹಗರಿಬೊಮ್ಮನಹಳ್ಳಿಯಲ್ಲಿ ಕೆಲವರು ಪ್ರತ್ಯೇಕ ಸಭೆಗಳನ್ನು ಆಯೋಜಿಸಿ ಪಕ್ಷಕ್ಕೆ ಮುಜುಗರ ತರುವ ಪ್ರಯತ್ನ ಮಾಡಿದ್ದಾರೆ. ಅಂಥಹವರಲ್ಲಿ ಕೆಲವರಿಗೆ ಈಗಾಗಲೇ ಪಕ್ಷದ ಶಿಸ್ತು ಸಮಿತಿಯಿಂದ ನೋಟಿಸ್ ನೀಡಲಾಗಿದೆ. ಇನ್ನುಳಿದವರಿಗೂ ಕಾರಣ ಕೇಳಿ ನೋಟಿಸ್ ನೀಡಲಾಗುತ್ತದೆ. ಸೂಕ್ತ ಉತ್ತರ ನೀಡದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಕಾಂಗ್ರೆಸ್‌ನಲ್ಲಿ ಯಾರೂ ಪಕ್ಷಕ್ಕಿಂತ ದೊಡ್ಡವರು ಅಲ್ಲ. ಹೂವಿನಹಡಗಲಿಯಲ್ಲಿ ಹಾಲಿ ಶಾಸಕ ಪಿ.ಟಿ.ಪಮರೇಶ್ವರ ನಾಯ್ಕ ಅವರಿಗೆ ಟಿಕೆಟ್ ನೀಡಬಾರದು ಎಂಬ ರಾಜ್ಯಸಭೆ ಮಾಜಿ ಸದಸ್ಯ ಕೆ.ಸಿ.ಕೊಂಡಯ್ಯ ಹೇಳಿಕೆ ವೈಯಕ್ತಿಕವಾದದ್ದು ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಜಶೇಖರ ಹಿಟ್ನಾಳ್, ಇಮಾಮ್ ನಿಯಾಜಿ, ಖಾಜಾಹುಸೇನ್, ವಿನಾಯಕ, ಗುಜ್ಜಲ ನಾಗರಾಜ್, ವೀರಸ್ವಾಮಿ, ರಾಮಕೃಷ್ಣ ನಿಂಬಗಲ್ ಉಪಸ್ಥಿತರಿದ್ದರು.