ಪ್ರಣಾಳಿಕೆಯಂತೆ ನಡೆದ ಕಾಂಗ್ರೆಸ್ ಸರ್ಕಾರ : ಕಾಗೋಡು ತಿಮ್ಮಪ್ಪ

6 ಎಸ್ಕೆಪಿ 2b
Published on

ಶಿಕಾರಿಪುರ: ತಾಲೂಕಿನಲ್ಲಿ ಕಾಂಗ್ರೆಸ್ ಇನ್ನೂ ಬಲಿಷ್ಠವಾಗಬೇಕು. ನಮ್ಮ ಪಕ್ಷದ ಕಾರ್ಯಕರ್ತರು ಸೈನಿಕರಂತೆ ಹಗಲಿರುಳು ದುಡಿಯಬೇಕು ಎಂದು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಸಲಹೆ ನೀಡಿದರು.

ಕಾಂಗ್ರೆಸ್ ಪಕ್ಷದ ನೂತನ ತಾಲೂಕು ಕಚೇರಿ ಉದ್ಘಾಟನೆ ಹಾಗೂ ತಮಗೆ ದಿ.ದೇವರಾಜ ಅರಸು ಪ್ರಶಸ್ತಿ ದೊರೆತಿದ್ದಕ್ಕೆ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಽಕಾರಕ್ಕೆ ಬಂದ ಮೇಲೆ ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಿದೆ. ಚುನಾವಣೆ ಸಂದರ್ಭದಲ್ಲಿ ಪಕ್ಷ ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದುಕೊಂಡಿದೆ. ನಾಲ್ಕೂ ಗ್ಯಾರಂಟಿಗಳನ್ನು ಪೂರೈಸಿದ್ದು ದೇಶದಲ್ಲಿ ಯಾವ ಸರ್ಕಾರವೂ ಮಾಡದ ಸಾಧನೆ ಮಾಡಿದೆ. ಇದು ನಾಡಿನ ಜನತೆ ಪಕ್ಷದ ಮೇಲಿಟ್ಟಿರುವ ವಿಶ್ವಾಸ, ನಂಬಿಕೆಯ ಪ್ರತೀಕ ಎಂದರು.
ಸಿದ್ದರಾಮಯ್ಯ ಒಬ್ಬ ಸಮರ್ಥ ನಾಯಕ. ಅವರು ಜಾತ್ಯತೀತ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು ಬಡವರ, ಹಿಂದುಳಿದವರ ಪರ ಇದ್ದಾರೆ. ಪಕ್ಷದ ಕಾರ್ಯಕರ್ತರಿಗೆ ನೂತನ ಕಚೇರಿ ಲೋಕಾರ್ಪಣೆ ಆಗಿರುವುದು ಸಂತಸದ ಸಂಗತಿ. ಪಕ್ಷ ಇನ್ನಷ್ಟು ಬಲಿಷ್ಠವಾಗಿರಲು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಮನೆಗಳಿಗೆ ತಲುಪಿಸುವ ಕೆಲಸ ಮಾಡಬೇಕು. ಜನರ ನಿರೀಕ್ಷೆ ಹುಸಿಯಾಗದಂತೆ ಇಂದಿನಿAದಲೇ ಅವರ ಸಮಸ್ಯೆಗಳ ಬಗ್ಗೆ ಗಮನಹರಿಸಿ ಅದನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದರು.
ಲೋಕಸಭಾ ಚುನಾವಣೆ ಹತ್ತಿರಬರುತ್ತಿದ್ದು ಈ ಬಾರಿ ಶಿವಮೊಗ್ಗ ಕ್ಷೇತ್ರವನ್ನು ಗೆಲ್ಲಬೇಕಿದೆ. ತಾಲೂಕಿನ ಬಗರ್‌ಹುಕುಂ ಸಾಗುವಳಿದಾರರು, ಶರಾವತಿ ಸಂತ್ರಸ್ತರ ಸಮಸ್ಯೆಗಳಿಗೆ ಮೊದಲು ಸ್ಪಂದಿಸಬೇಕು. ನಮ್ಮದೆ ಸರ್ಕಾರ ಆಡಳಿತದಲ್ಲಿರುವುದರಿಂದ ಜನತೆಯ ದನಿಯಾಗಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಹೇಳಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ದೇವರಾಜ ಅರಸು ಅವರು ಜನ ಹಿತಕ್ಕಾಗಿಯೇ ತಮ್ಮನ್ನು ಸಮರ್ಪಿಸಿಕೊಂಡವರು. ಅಂತೆಯೇ ಕಾಗೋಡು ತಿಮ್ಮಪ್ಪ ಅವರಿಗೆ ಈ ಪ್ರಶಸ್ತಿ ಸಂದಿರುವುದು ಮೌಲ್ಯ ಹೆಚ್ಚಿಸಿದಂತಾಗಿದೆ. ಗೇಣಿದಾರರ ಬವಣೆ ಕಂಡು ಅವರ ಪರ ಕಾಗೋಡು ಚಳವಳಿ ಮೂಲಕ ಸಾಮಾಜಿಕ ಕಳಕಳಿ ಮೆರೆದವರು ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಮಾತನಾಡಿ, ಕಾಗೋಡು ತಿಮ್ಮಪ್ಪ ಕೇವಲ ವ್ಯಕ್ತಿಯಲ್ಲ. ಅವರು ಜನ ಪರ ಹೋರಾಟದ ಅದ್ಭುತ ಶಕ್ತಿ. ಛಲಬಿಡದ ತ್ರಿವಿಕ್ರಮನ ಹಾಗೆ ಜನಪರ ಹೋರಾಟದಲ್ಲಿ ಗುರಿ ಮುಟ್ಟುವವರೆಗೂ ವಿಶ್ರಾಂತಿ ಪಡೆಯದೇ ಹೋರಾಟ ಮಾಡಿ ಯಶಸ್ವಿಯಾದ ಅಪರೂಪದ ಮಾದರಿ ನಾಯಕ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್, ಮಾಜಿ ಕಾಡಾ ಅಧ್ಯಕ್ಷ, ನಗರದ ಮಹದೇವಪ್ಪ, ಪಕ್ಷದ ಜಿ¯್ಲÁಧ್ಯಕ್ಷ ಎಚ್.ಎಸ್. ಸುಂದರೇಶ್, ಜಿ¯್ಲÁ ಪ್ರಧಾನ ಕಾರ್ಯದರ್ಶಿ ಉಳ್ಳಿ ದರ್ಶನ್, ಗೋಣಿಪ್ರಕಾಶ್, ಚಂದ್ರಕಾAತ ಪಾಟೀಲï, ಪುಷ್ಪಾ ಶಿವಕುಮಾರ್, ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕವಲಿ ಗಂಗಾಧರ್, ಭಂಡಾರಿ ಮಾಲತೇಶ್, ಸ.ನ. ಮಂಜಪ್ಪ, ಎನ್.ಅರುಣ್ ಇತರರಿದ್ದರು.

ಉಸ್ತುವಾರಿ ಸಚಿವರ ಅನುಪಸ್ಥಿತಿ
ಹೊಸ ಕಾಂಗ್ರೆಸ್ ಕಚೇರಿ ನಿರ್ಮಾಣವಾಗಿದ್ದು ಲೋಕಾರ್ಪಣೆ, ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರ ಸನ್ಮಾನ ಕಾರ್ಯಕ್ರಮಕ್ಕೆ ಜಿ¯್ಲÁ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಾರದಿರುವುದರಿಂದ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಅವರನ್ನು ಎರಡ್ಮೂರು ಬಾರಿ ಆಹ್ವಾನಿಸಲಾಗಿತ್ತು. ಅವರು ಬಂದಿದ್ದರೆ ಕಾರ್ಯಕ್ರಮಕ್ಕೆ ಮೆರುಗು ಬರುತ್ತಿತ್ತು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಹೇಳಿದರು. ತುರ್ತು ಕೆಲಸದ ಕಾರಣಗಳಿಂದಾಗಿ ಅವರು ಬಂದಿಲ್ಲ ಎಂದು ಕಾಗೋಡು ತಿಮ್ಮಪ್ಪ ಮತ್ತು ಜಿಲ್ಲಾಧ್ಯಕ್ಷ ಸುಂದರೇಶ್ ಕಾರ್ಯಕರ್ತರನ್ನು ಸಮಾಧಾಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net