

ನೆಲಮಂಗಲ: ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕಾಂಗ್ರೆಸ್ ಆದ್ಯತೆ ನೀಡುತ್ತಿದ್ದು, ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಂಡು ಸಬಲರಾಗಬೇಕು ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಇಸ್ಮಾಂಪುರದಲ್ಲಿ ಕಣೇಗೌಡನಹಳ್ಳಿ ಗ್ರಾಪಂನಿಂದ ಆಯೋಜಿಸಿದ್ದ ಶಾಸಕರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2024&25 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಇಲಾಖೆಯಿಂದ ಅಲ್ಪಸಂಖ್ಯಾತರ ಅಭಿವೃದ್ಧಿಗೆ 15 ಕೋಟಿ ವಿಶೇಷ ಅನುದಾನ ಮಂಜೂರಾಗಿದೆ, ತಾಲೂಕಿನಲ್ಲಿ ಅತಿಹೆಚ್ಚು ಮುಸಲ್ಮಾನರಿದ್ದು, ಇಸ್ಮಾಂಪುರ ಗ್ರಾಮಕ್ಕೆ 5 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಮುಂದಿನ 3 ವರ್ಷದ ಒಳಗಾಗಿ ಇಸ್ಮಾಂಪುರದ ಪ್ರಮುಖ ರಸ್ತೆ, ಚರಂಡಿಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ತಾಲೂಕಿನಲ್ಲಿ ಬೃಹತ್ ಗಾತ್ರದ ಶಾದಿ ಮಹಲ್ ನಿರ್ಮಾಣಕ್ಕೆ ಅಲ್ಪಸಂಖ್ಯಾತರ ಇಲಾಖೆಯಿಂದ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಹೆಚ್ಚುವರಿ 2 ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ. ಇಸ್ಮಾಂಪುರ ಅಭಿವೃದ್ಧಿ ಕಾಮಗಾರಿ ಹಾಗೂ ಶಾದಿ ಮಹಲ್ಗೆ ಸಚಿವ ಜಮೀರ್ ಅಹಮ್ಮದ್ ಮೂಲಕ ಆದಷ್ಟು ಬೇಗ ಭೂಮಿ ಪೂಜೆ ಮಾಡಿಸುವುದಾಗಿ ಶಾಸಕ ಎನ್.ಶ್ರೀನಿವಾಸ್ ಹೇಳಿದರು.
ಸಾರ್ವಜನಿಕರ ಮನವಿ : ವಾಲ್ಮೀಕಿ ನಗರದ ವಿದ್ಯುತ್ ಸಮಸ್ಯೆ, ಬೀದಿ ದೀಪ, ಮದರಸಾ ಬಳಿ ಕಾಂಪೌಂಡ್ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ, ಶುದ್ಧ ಕುಡಿಯುವ ನೀರಿನ ಟಕ ನಿರ್ಮಾಣ, ಓವರ್ ಟ್ಯಾಂಕ್ ನಿರ್ಮಾಣ, ಕ್ರೀಡಾ ಮೈದಾನಕ್ಕೆ ಜಾಗ ಮಂಜೂರು ಮಾಡಬೇಕು, ಈದ್ಗಾ ಮೈದಾನ ಜಾಗ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಸ್ಥಳಿಯರು ಶಾಸಕರಲ್ಲಿ ಮನವಿ ಮಾಡಿದರು. ಒಂದು ಲಕ್ಷ ಲೀಟರ್ ಸಾಮಾರ್ಥ್ಯದ ಬೃಹತ್ ಓವರ್ ಟ್ಯಾಂಕ್ ನಿರ್ಮಾಣ, 2 ಶುದ್ಧ ಕುಡಿಯುವ ನೀರಿನ ಟಕ ಸೇರಿ ಸಾರ್ವಜನಿಕರು ಹೇಳಿದ ಸಮಸ್ಯೆಗಳನ್ನು ಹಂತ ಹಂತವಾಗಿ ಬಗ್ಗೆ ಹರಿಸಲಾಗುವುದು. ಜತೆಗೆ ಈದ್ಗಾ ಮೈದಾನ ಕುರಿತು ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಶಾಸಕರು ಭರವಸೆಯಿತ್ತರು.
ಚಾಲನೆ : ಕೆ.ಜಿ.ಶ್ರೀನಿವಾಸಪುರದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಎನ್.ಶ್ರೀನಿವಾಸ್ ಭೂಮಿ ಪೂಜೆ ನೆರವೇರಿಸಿದರು. ಬ್ಲಾಕ್ ಅಧ್ಯಕ್ಷ ಟಿ.ನಾಗರಾಜು, ಒಕ್ಕಲಿಗ ೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಂ.ಕೆ.ನಾಗರಾಜು, ಗ್ರಾಪಂ ಸದಸ್ಯ ಸಲೀಂಪಾಷಾ, ಮಾಜಿ ಸದಸ್ಯ ಇಕ್ಬಾಲ್ ಅಹಮ್ಮದ್, ಮುಖಂಡ ಸುರೇಶ್, ಆನಂದ್, ಗೋವಿಂದರಾಜು, ಸನ್ನಾಉಲ್ಲಾ, ರೆಹಮಾನ್ ಇದ್ದರು.