ಕಾಂಗ್ರೆಸ್ ಸರ್ಕಾರದಿಂದ ಬಡವರಿಗೆ ಸಮಸ್ಯೆ

blm (5)
Published on

ಕಾರ್ಕಳ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಡೀ ರಾಜ್ಯದಲ್ಲಿ ಬಡವರು ಒಂದಲ್ಲ ಒಂದು ಸಮಸ್ಯೆ ಎದುರಿಸುವಂತಾಗಿದೆ. ವಿದ್ಯುತ್ ಉಚಿತವಾಗಿ ನೀಡುತ್ತೇವೆ ಎಂದ ಸರ್ಕಾರ ಇದೀಗ ಏಕಾಏಕಿ ವಿದ್ಯುತ್ ದರ ದುಪ್ಪಟ್ಟು ವಾಡಿದೆ. ಬಸ್ ದರವೂ ಜಾಸ್ತಿಯಾಗಿದೆ. ಸರ್ಕಾರದ ದುರಾಡಳಿತದಿಂದ ಕೂಲಿ ಕಾರ್ಮಿಕರು ಪರದಾಟ ನಡೆಸುವಂತಾಗಿದೆ ಎಂದು ಕರಾವಳಿ ಪ್ರಾಧಿಕಾರ ವಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.

ನಂದಳಿಕೆ ಗ್ರಾಮ ಪಂಚಾಯಿತಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಬೆಳ್ಮಣ್ ಸರ್ವಜ್ಞ ತಂತ್ರಿ ವಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲವೂ ದುಬಾರಿ ದುನಿಯಾವಾಗುತ್ತಿದೆ. ವಿದ್ಯುತ್, ಬಸ್ ದರ ಸೇರಿದಂತೆ ಎಲ್ಲ ವಿಧದಲ್ಲೂ ದರ ಹೆಚ್ಚಳವಾಗಿದೆ ಎಂದರು.

ನಂದಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನೋದಾ, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಬೋಳ, ಬಿಜೆಪಿ ಮುಖಂಡ ಸೂರ್ಯಕಾಂತ್ ಶೆಟ್ಟಿ, ಕಾರ್ಕಳ ತಾಲೂಕು ಯುವ ಮೋರ್ಚಾ ಕಾರ್ಯದರ್ಶಿ ಧೀರಾಜ್ ಎಸ್., ಗ್ರಾಪಂ ವಾಜಿ ಅಧ್ಯಕ್ಷೆ ನಿತ್ಯಾನಂದ ಅಮೀನ್ ಹಾಗೂ ಗ್ರಾ.ಪಂ. ಸದಸ್ಯರು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net