ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಪತನ

C.T._Ravi
Published on

ಬಳ್ಳಾರಿ : ಲೋಕಸಭೆ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ನಗರದ ಬಸವ ಭವನದಲ್ಲಿ ಗುರುವಾರ ಜರುಗಿದ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕ ಅವರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಬಾರಿಯ ಚುನಾವಣೆ ರಾಮ ಮತ್ತು ಬಾಬರ್ ನಡುವಿನ ಚುನಾವಣೆ. ಹನುಮ ಮತ್ತು ಟಿಪ್ಪುವಿನ ನಡುವಿನ ಸಮರ. ಮಂಡ್ಯದಲ್ಲಿ ಹನುಮನ ಬಾವುಟ ಇಳಿಸಿದ್ದು ಸರಿಯಲ್ಲ. ಹನುಮ ಧ್ವಜವನ್ನು ಇಳಿಸಿದ ಕಾಂಗ್ರೆಸ್‌ಸ್ಸಿಗರ ಟಿಪ್ಪು ಸಂಸ್ಕೃತಿಯನ್ನು ಬಿಂಬಿಸುತ್ತದೆ. ಹನುಮನ ಬಾಲಕ್ಕೆ ಬೆಂಕಿ ಇಟ್ಟಿದ್ದಕ್ಕೆ ಲಂಕೆ ಸುಟ್ಟುಹೋಯ್ತು. ಹನುಮನ್ನು ಕೆಣಕಿದ ರಾವಣನೇ ಉಳಿಯಲಿಲ್ಲ. ಇನ್ನು ಕಾಂಗ್ರೆಸ್ ಕೂಡ ಉಳಿಯುವುದಿಲ್ಲ. ಇಡೀ ದೇಶದಲ್ಲೇ 20 ಸೀಟು ಕೂಡ ಗೆಲ್ಲಲ್ಲ ಎಂದರು.

ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಪತನ ಆಗುತ್ತದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮನೆಗೆ ಹೋಗುತ್ತಾರೆ ಎಂದರು. ಮೈಮರೆತರೆ ವಿನಾಶಕ್ಕೆ ಕಾರಣ. ದೇಶದ ರಕ್ಷಣೆಗೆ ಮೋದಿಯೇ ಗ್ಯಾರಂಟಿ. ಯಾವ ಗ್ಯಾರಂಟಿಯೂ ನಡೆಯಲ್ಲ ಎಂದು ತಿಳಿಸಿದರು.

ಇನ್ನು ಸಿದ್ದರಾಮಯ್ಯ ಅವರು ಜನರಿಗೆ ಗ್ಯಾರಂಟಿ ಬೆದರಿಕೆ ಹಾಕುತ್ತಿದ್ದಾರೆ. ಹಾಲಿನ ದರ, ಹಾಲ್ಕೋಹಾಲ್ ದರ ಏರಿಕೆ ಮಾಡಿದ್ದಾರೆ. ವಿದ್ಯುತ್, ಬಸ್ ದರ ಏರಿಕೆ ಆಗಿದೆ. ರೈತರಿಗೆ ನೀಡುವ ಪಹಣಿ ಬೆಲೆ 40 ರೂ.ಗೆ ಹೆಚ್ಚಾಗಿದೆ. ಮನೆಹಾಳು ಮಾಡುವ ಕಾಂಗ್ರೆಸಿಗರನ್ನು ಮನೆ ಕಳುಹಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net