ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ದೂರು

Published on

ಮೈಸೂರು: ಉದಯಗಿರಿ ಗಲಭೆ ಹಿಂದೆ ಮಾಜಿ ಸಂಸದ ಪ್ರತಾಪ ಸಿಂಹ ಕುಮ್ಮಕ್ಕು ಇದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನಿಂದ ದೂರು ನೀಡಲಾಗಿದೆ.

ಮಾಜಿ ಸಂಸದ ಪ್ರತಾಪ ಸಿಂಹ ಅವರ ಸಹಚರರಾಗಿರುವ ಸತೀಶ್ ಅಲಿಯಾಸ್ ಪಾಂಡುರಂಗ ಅವರಿಗೆ ಕುಮ್ಮಕ್ಕು ನೀಡಿ ವಾಟ್ಸ್‌ಆ್ಯಪ್‌ನಲ್ಲಿ ರಾಹುಲ್ಗಾಂಧಿ, ಅರವಿಂದ್ ಕ್ರೇಜಿವಾಲ್ ಹಾಗೂ ಅಖಿಲೇಶ್ ಯಾದವ್ ಅವರ ಭಾವಚಿತ್ರಕ್ಕೆ ತ್ರೀ ಈಡಿಯಟ್ಸ್ ಹಾಗೂ ಮುಸಲ್ಮಾನ ಧರ್ಮಗುರುಗಳ ಹೆಸರು, ಮುಸಲ್ಮಾನ ಧರ್ಮದ ಗುರುಗಳ ಪದಗಳ ಬಳಕೆ ಮಾಡಿ ಪ್ರಚೋದನಕಾರಿ ಪೋಸ್ಟ್ ಹಾಕಿಸಿ ಸಮಾಜದ ಶಾಂತಿ ನೆಮ್ಮದಿ ಕದಡಲು ಕಾರಣವಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿಸಲಾಗಿದೆ.

ಘಟನೆ ಬಳಿಕ ಮರು ದಿನ ಪೊಲೀಸ್ ಠಾಣೆಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಸಲ್ಮಾನರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಒಂದು ಧರ್ಮಕ್ಕೆ ಧಕ್ಕೆಯನ್ನುಂಟು ಮಾಡಿ ಗಲಭೆಯ ರೂವಾರಿಯಾಗಿರುತ್ತಾರೆ ಎಂದು ದೂರಲಾಗಿದೆ.

ಈ ಎಲ್ಲ ವಿಚಾರಗಳನ್ನು ಪರಿಗಣಿಸಿ ಪ್ರತಾಪಸಿಂಹ ವಿರುದ್ಧ ಉದಯಗಿರಿ ಗಲಭೆ ಕಾರಣಕರ್ತರಾದ ಆರೋಪದ ಮೇಲೆ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ದೀಪಕ್‌ಕುಮಾರ್ ಉದಯಗಿರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net