ಕಾಂಗ್ರೆಸ್ ಗುಂಪುಗಾರಿಕೆಯಿಂದ ಅಭಿವೃದ್ದಿ ಕುಂಠಿತ-ವಿರೂಪಾಕ್ಷಿ

raichur
raichur
Published on

ರಾಯಚೂರು ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದ ಸೌಂದರ್ಯೀಕರಣ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ಟೆಂಡರ್ ಆಗಿದ್ದರೂ, ಕಾಂಗ್ರೆಸ್ ಪಕ್ಷದ ಗುಂಪುಗಾರಿಕೆಯಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಂಡಿದೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹಾಗೂ ಸಚಿವ ಎನ್.ಎಸ್.ಬೋಸರಾಜುರ ಗುಂಪುಗಾರಿಕೆಯಿಂದ ಅಭಿವೃದ್ಧಿ ಅಡ್ಡಿಯಾಗಿದ್ದು, 40 ಕೋಟಿ ರೂ.ಕಾಮಗಾರಿಗಳಿಗೆ ನಗರಾಭಿವೃದ್ಧಿ ಇಲಾಖೆ ಆಯುಕ್ತರು ಅನುಮೋದನೆ ನೀಡಿದ್ದರೂ ಕೆಲಸ ಪ್ರಾರಂಭವಾಗಿಲ್ಲ.

ಫೆಬ್ರುವರಿ 20 ರಂದು 18ಕಾಮಗಾರಿಗಳಿಗೆ ಅನುಮೋದನೆನೀಡಲಾಗಿದೆ. ಮೇ.16 ರಂದು ಆಯುಕ್ತರು ಕಾಮಗಾರಿಗೆ ಅನುಮೋದನೆ ನೀಡಿದ್ದಾರೆ. ಪಿಡಬ್ಲೂಡಿ ಇಲಾಖೆಗೆ ಕಾಮಗಾರಿವಹಿಸಲಾಗಿದೆ. 5 ತಿಂಗಳಾದರೂ ಕಾಲಹರಣ ಮಾಡಲಾಗುತ್ತಿದೆ. ಸಚಿವರ ಸೂಚನೆ ಮೇರೆಗೆ ಕೆಲಸಗಳು ಸ್ಥಗಿತಗೊಂಡಿವೆ ಒಂದುವಾರದಲ್ಲಿ ಕಾಮಗಾರಿಗಳು ಪ್ರಾರಂಭವಾಗದೇ ಹೋದಲ್ಲಿ ವಿನೂತನ ಹೋರಾಟಕ್ಕೆ ಜೆಡಿಎಸ್ ಸಿದ್ದಗೊಳ್ಳಲಿದೆ ಎಂದು ಎಚ್ಚರಿಸಿದರು.


ಮಾವಿನಕೆರೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಿದ್ದು ಒತ್ತುವರಿತೆರವುಗೊಳಿಸುವ ಬದಲು ರಸ್ತೆ ನಿರ್ಮಿಸಿಕೊಟ್ಟಿದ್ದಾರೆ. ನಗರದಕೃಷ್ಣಗಿರಿ ಹಿಲ್ಸ್ ನಲ್ಲಿ 10 ಕೆರಗಳುನ್ನು ನಾಶ ಮಾಡಿ ನಿವೇಶನಗಳಾಗಿ ಪರಿವರ್ತಿಸಲಾಗಿದೆ. ಸಣ್ಣ ನೀರಾವರಿ ಸಚಿವರು ಕೆರೆ ರಕ್ಷಿಸುವದಾಗಿ ಹೇಳುತ್ತಿದ್ದಾರೆ.ನಗರದ ಶಾಸಕರು ನಿಷ್ಕ್ರಿಯೆಯಾಗಿದ್ದಾರೆ. ನಮ್ಮ ಸರ್ಕಾರ ಇಲ್ಲ ಎಂದು ಹೇಳಿ ನುಣಚಿಕೊಳ್ಳುತ್ತಿದ್ದಾರೆ. ಕೂಡಲೇ ಅಭಿವೃದ್ದಿ ಕಾರ್ಯಗಳು ಪ್ರಾರಂಭಿಸಬೇಕು. ನಗರ ಪ್ರಜ್ಞಾವಂತರ ಜನರು ಹೋರಾಟವನ್ನು ಬೆಂಬಲಿಸಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನರಸಪ್ಪ ಆಶಾಪುರು, ನಾಗರಾಜಗೌಡ, ಹಂಪಯ್ಯ ಸಾಹುಕಾರ, ರಾಮು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net