ಮನಮೋಹನ್​ಸಿಂಗ್ ಆರ್ಥಿಕ ಚಿಂತನೆ ಮಾದರಿ

dj clk congress
Published on

ಚಳ್ಳಕೆರೆ: ದೇಶದ ಅರ್ಥ ವ್ಯವಸ್ಥೆ ಸುಧಾರಣೆಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಆರ್ಥಿಕ ಚಿಂತನೆ ಮತ್ತು ಜಾರಿ ಮಾಡಿದ ಯೋಜನೆಗಳು ಮಾದರಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಟಿ.ಪ್ರಭುದೇವ್ ಹೇಳಿದರು.

ನಗರದ ಶಾಸಕರ ಭವನದಲ್ಲಿ ಶುಕ್ರವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ಡಾ.ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಸಿಂಗ್ ಮಿತ ಭಾಷಿಯಾಗಿದ್ದರು. ದೂರದೃಷ್ಟಿಯ ಚಿಂತನೆ, ಆದರ್ಶದ ಆಡಳಿತ ನಡೆಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಹಣಕಾಸು ನಿರ್ವಹಣೆಯ ಪ್ರತಿಹಂತದಲ್ಲೂ ಜಾಗೃತಿ ವಹಿಸುತ್ತಿದ್ದರು. ರಾಜಕಾರಣದಲ್ಲಿ ಮಾದರಿಯಾಗಿ ಉಳಿದುಕೊಂಡ ಧೀಮಂತ ನಾಯಕ ಎಂದು ಬಣ್ಣಿಸಿದರು.

ನಗರಸಭೆ ಅಧ್ಯಕ್ಷೆ ಜೈತುನ್​ಬಿ, ಉಪಾಧ್ಯಕ್ಷೆ ಸುಮಾ, ಪಿ. ತಿಪ್ಪೇಸ್ವಾಮಿ, ಎಸ್.ಎಚ್. ಸೈಯದ್, ಮೂಡಲಗಿರಿಯಪ್ಪ, ಟಿ. ಮಲ್ಲಿಕಾರ್ಜುನ, ಆರ್. ನೇತಾಜಿ ಪ್ರಸನ್ನ, ಗಾಂಧಿನಗರ ಕೃಷ್ಣ, ಅನ್ವರ್ ಮಾಸ್ಟರ್, ಮೈಲಾರಪ್ಪ, ಆರ್. ವೀರಭದ್ರಪ್ಪ, ನಿಜಲಿಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net