ಕಾಂಗ್ರೆಸ್‌ನಿಂದ ಜನತೆಗೆ ಮುಜುಗರ

protest-1
ರಾಜ್ಯ ಸರ್ಕಾರ ವಿರುದ್ಧ ಬಿಜೆಪಿ ಕಾಪಿ ಮಂಡಲ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮುಖಂಡರಾದ ಲಾಲಾಜಿ ಆರ್ ಮೆಂಡನ್, ಜಿತೇಂದ್ರ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ರಾಜ್ಯ ಸರ್ಕಾರದಿಂದ ನೂರಾರು ಗೊಂದಲ, ತೊಂದರೆಗಳನ್ನು ಜನರು ಎದುರಿಸುತ್ತಿದ್ದು, ಅಭಿವೃದ್ಧಿ ಕಾರ್ಯಗಳಂತೂ ಶೂನ್ಯವಾಗಿದೆ. ಇದರ ನಡುವೆ ವಕ್ಫ್ ಸಚಿವರು ಹುಚ್ಚಾಟಕ್ಕೆ ಕೈಹಾಕಿ ರಾಜ್ಯದ ಜನತೆಯನ್ನು ಮುಜುಗರಗೊಳ್ಳುವಂತೆ ಮಾಡಿದ್ದು, ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ವಕ್ಫ್ ಬೋರ್ಡ್ ಅವಾಂತರ ಖಂಡಿಸಿ ರಾಜ್ಯ ಸರ್ಕಾರ ವಿರುದ್ಧ ಬಿಜೆಪಿ ಕಾಪು ಮಂಡಲ ವತಿಯಿಂದ ಕಾಪು ಪೇಟೆಯಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಜನರ ಸಾಮರಸ್ಯ ಬದುಕಿಗೆ ರಾಜ್ಯ ಸರ್ಕಾರ ಹಗರಣಗಳ ಮೂಲಕ ಕೊಳ್ಳಿ ಇಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಕಾರ್ಯಕರ್ತರು ಕಾಪು ತಾಲೂಕು ಕಚೇರಿ ತನಕ ಪಾದಯಾತ್ರೆ ನಡೆಸಿದ್ದು, ಬಳಿಕ ಉಪತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಬೈಕಾಡಿ ಸುಪ್ರಸಾದ್ ಶೆಟ್ಟಿ, ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷೆ ಸರಿತಾ, ಪ್ರಮುಖರಾದ ಶ್ಯಾಮಲಾ ಕುಂದರ್, ಪ್ರಕಾಶ್ ಶೆಟ್ಟಿ, ಶ್ರೀಕಾಂತ್ ನಾಯಕ್, ಶಿಲ್ಪಾ ಜಿ ಸುವರ್ಣ, ಗೀತಾಂಜಲಿ ಸುವರ್ಣ, ಮಿಥುನ್ ಹೆಗ್ಡೆ, ಶರಣ್ ಕುಮಾರ್, ರೇಷ್ಮಾ ಉದಯ್ ಶೆಟ್ಟಿ, ನೀತಾ ಗುರುರಾಜ್, ಸುಮಾ ಶೆಟ್ಟಿ, ಸುಧಾಮ ಶೆಟ್ಟಿ, ಗೋಪಾಲಕೃಷ್ಣ ರಾವ್, ರವೀಂದ್ರ ಶೆಟ್ಟಿ, ಕೃಷ್ಣಾ ರಾವ್, ವಿಜಯಕುಮಾರ್, ನಾಗೇಂದ್ರ ಎಂ. ಜಿ, ಹರೀಶ್, ಕೇಸರಿ, ನವೀನ್ ಎಸ್. ಕೆ, ಸಂದೀಪ್ ಶೆಟ್ಟಿ, ಸದಾನಂದ್ ನಾಯ್ಕ, ದಿಲ್ಲೇಶ್ ಶೆಟ್ಟಿ, ರಮಾಕಾಂತ್ ದೇವಾಡಿಗ, ಶಶಿಕಾಂತ, ಪ್ರಸಾದ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ಮುಂದಿನ ಸಂಸತ್ ಅಧಿವೇಶನದಲ್ಲಿ ಚರ್ಚೆ ನಡೆಯಲಿದ್ದು, ವಕ್ಫ್ ಮಂಡಳಿಗೆ ಬೇರೆ ಕಾನೂನು ಜಾರಿಗೆ ಪ್ರಯತ್ನ ನಡೆಯುತ್ತಿದೆ. ಅಸಂಬದ್ಧ ಹೇಳಿಕೆ ನೀಡುತ್ತಿರುವ ಸಚಿವ ಜಮೀರ್‌ರನ್ನು ಸಂಪುಟದಿಂದ ಕೈಬಿಟ್ಟು ಶಿಸ್ತಿನ ಕ್ರಮ ಕೈಗೊಳ್ಳಬೇಕು. -ಗುರ್ಮೆ ಸುರೇಶ್ ಶೆಟ್ಟಿ ಶಾಸಕ https://www.vijayavani.net/problems-for-farmers-due-to-waqf-notice https://www.vijayavani.net/amriteshwari-sevayat-invitation-release

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net